ಅಲ್ಲಿನ ಮಹಿಳೆಯರನ್ನ ನೋಡಿದ್ರೆ ಏನೋ ನಡಿತಿದೆ : ದಾಳಿ ವೇಳೆ ಪೊಲೀಸರ ಅನುಮಾನ ಸುಳ್ಳಾಗಲಿಲ್ಲ

ಹೀಗೊಂದು ಮಾಹಿತಿ ಮೈಸೂರು ಪೊಲೀಸರಿಗೆ ಲಭ್ಯವಾಗಿತ್ತು. ಅದೇನೆಂದ್ರೆ ‘ಇಲ್ಲಿ ಬೋರ್ಡ್ ಇರುವುದೇ ಒಂದು. ಇಲ್ಲಿಗೆ ಬರುವವರನ್ನ ನೋಡಿದ್ರೆ ಕಾಣೋದೇ ಮತ್ತೊಂದು.’ ಈ ಮಾಹಿತಿ ಇಟ್ಕೊಂಡು ಪೊಲೀಸರು ಆ ಸ್ಥಳದ ಹತ್ತಿರ ಕಣ್ಣು ಹಾಯಿಸಲು ಮುಂದಾಗಿದ್ರು. ಒಂದು ದಿನ ಅನುಮಾನ ಬಂದು ಅಲ್ಲಿಗೆ ಹೋದ ಪೊಲೀಸರಿಗೆ ತಮ್ಮ ಅನುಮಾನ ಸುಳ್ಳಾಗಿರಲಿಲ್ಲ.

ಹೌದು..  ಮೈಸೂರಿನ ಹರ್ಷ ರಸ್ತೆಯಲ್ಲಿರುವ ಹೋಟೆಲೊಂದರ ಮಹಡಿ ಮೇಲೆ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಹೋಟೆಲ್ ನ ಎರಡನೇ ಮಹಡಿಯಲ್ಲಿ ಬ್ಯೂಟಿ ಸಲೂನ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಮಾಹಿತಿ ಪಡೆದ ಮೈಸೂರು ಸಿಸಿಬಿ ಘಟಕದ ಪೊಲೀಸರು ದಾಳಿ ನಡೆಸಿದ್ದು, ಕೋಲ್ಕತ್ತಾ ಮೂಲದ ಇಬ್ಬರು, ಮಂಡ್ಯ ಮೂಲದ ಇಬ್ಬರು ಹಾಗೂ ಮೈಸೂರಿನ ಒಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights