ಇಂದು ಸಂಜೆ 4ಕ್ಕೆ ನಿರ್ಮಲಾ ಸೀತಾರಾಮನ್ ಆರ್ಥಿಕ ಪ್ಯಾಕೇಜ್ ನ ಇನ್ನಷ್ಟು ವಿವರ ಕೊಡುವ ಸಾಧ್ಯತೆ..

ಮೊನ್ನೆ ಮೋದಿಯವರು ಭಾರತದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ಕೆಲ ವಿವರಗಳನ್ನು ನಿನ್ನೆ ಪ್ರಸ್ತಾಪಿಸಿ ಇಂದು ಮತ್ತೆ ಮಾದ್ಯಮಗೋಷ್ಠಿ ಕರೆಸಿದ್ದಾರೆ.

ಹೌದು… ನಿನ್ನೆ  ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ, ಮುಂದಿನ ಮೂರು ತಿಂಗಳುಗಳು ಭಾರತದಲ್ಲಿರುವ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ, ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ,18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ವಾಪಸ್ , ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ಮೂಲಕ 2500 ಕೋಟಿ ರೂಪಾಯಿಯಷ್ಟು ಕೇಂದ್ರ ಸರ್ಕಾರ ನೆರವು ನೀಡುತ್ತದೆ ಎಂದೂ ತಿಳಿಸಿದ್ದರು.

ಇಂದು ಸಂಜೆ 4 ಗಂಟೆಗೆ ಮತ್ತೊಮ್ಮೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿ  ನಡೆಸುತ್ತಿದ್ದು,  ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಭಾಷಣದಲ್ಲಿ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‌ನ ಇನ್ನಷ್ಟು ವಿವರಗಳನ್ನು  ಹಂಚಿಕೊಳ್ಳುವ ನಿರೀಕ್ಷೆಯಿದೆ.

ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಪ್ರಧಾನಿ  ಮಾಡಿದ್ದ ಭಾಷಣದಲ್ಲಿ ಭೂಮಿ, ದ್ರವ್ಯತೆ, ಕಾರ್ಮಿಕ ಮತ್ತು ಕಾನೂನುಗಳನ್ನು ಕೇಂದ್ರೀಕರಿಸಿ ಆತ್ಮ ನಿರ್ಭರ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ವ್ಯಾಪಾರ, ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ ಮತ್ತು ದೊಡ್ಡ ಕೈಗಾರಿಕಾ ಘಟಕಗಳ ಸಂಕಷ್ಟದ ಕಾರಣ ಲಾಕ್‌ಡೌನ್‌ನ ತೀವ್ರತೆಯನ್ನು ಭರಿಸಲು ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ನೀಡಲಿರುವ ಹಣದ ಲಿಕ್ವಿಡಿಟಿ ಮಾಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.  ಇದರ ಜೊತೆಗೆ ಕೃಷಿ ಮತ್ತು ಅಸಂಘಟಿತ ಕಾರ್ಮಿಕರ ಬಗ್ಗೆ, ಪ್ಯಾಕೇಜ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಏನೇನು ಕೊಡಲಾಗುತ್ತದೆ? ವಲಸೆ ಕಾರ್ಮಿಕರಿಗೆ ಯಾವ ರೀತಿಯಲ್ಲಿ ನೆರವು ನೀಡಲಾಗುತ್ತದೆ? ಅಸಂಘಟಿತ ಕಾರ್ಮಿಕರಿಗೆ ಯಾವೆಲ್ಲಾ ಸಹಾಯಗಳು ಇರುತ್ತವೆ? ಎಂಬ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ವಿವರಣೆ ನೀಡುವ ಸಾಧ್ಯತೆ ಇದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights