ಇಂದು ಸ್ವಾತಿ ಅತ್ಯಾಚಾರ-ಕೊಲೆ ಪ್ರಕರಣದ ತೀರ್ಪು : ಜಿಲ್ಲೆಯಾದ್ಯಂತ ತೀವ್ರ ಕೂತೂಹಲ
ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ನಡೆದ ಸ್ವಾತಿ ಅತ್ಯಾಚಾರ-ಕೊಲೆ ಪ್ರಕರಣದ ತೀರ್ಪು ಹೊರಬೀಳಲಿದ್ದು ಜಿಲ್ಲೆಯಾದ್ಯಂತ ತೀವ್ರ ಕೂತೂಹಲ ಕೆರಳಿಸಿದೆ.
ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿ 2016ರಲ್ಲಿ ನಡೆದಿದ್ದ ಪ್ರಕರಣದ ತೀರ್ಪು ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಹೊರಬೀಳಲಿದೆ.
ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಸ್ವಾತಿ ಮೇಲೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅತ್ಯಾಚಾರ ಮಾಡಿ ಪಾಳು ಬಾವಿಗೆ ಹಾಕಿದ್ದ ಆರೋಪಿ ಪ್ರದೀಪ್, ಸಂತೋಷ್ ವಿರುದ್ದ ಪ್ರಕರಣ ದಾಖಲಾಗಿತ್ತು.
ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಕುಟುಂಬಸ್ಥರ ಆಗ್ರಹಿಸಿದ್ದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.