ಒಂದು ಶತಮಾನದಲ್ಲಿ ಇಷ್ಟು ಭೀಕರ ಪ್ರವಾಹ ಕಂಡಿಲ್ಲ : ಪರಿಹಾರ ಕಡಲೇಬೇಕು – ಸೌಮ್ಯಾ ರೆಡ್ಡಿ ಒತ್ತಾಯ
೨೫ ಜನ ಸಂಸದರಿದ್ದಾರೆ, ಜನರು ಬೀದಿಗೆ ಬಂದಿದ್ದಾರೆ, ಏನಾದ್ರು ಮಾಡಿ ಜನರಿಗೆ ಪರಿಹಾರ ಕೊಡಿಸಬೇಕು ಎಂದು ಧಾರವಾಡದಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಒತ್ತಾಯ ಮಾಡಿದ್ದಾರೆ.
ನಾನು ಅನೇಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆನೆ. ಒಂದು ಶತಮಾನದಲ್ಲಿ ಇಷ್ಟು ಭೀಕರ ಪ್ರವಾಹ ನಡೆದಿದ್ದು ಕಂಡಿಲ್ಲ. ನಾವು ಅನೇಕ ಪ್ರತಿಭಟನೆಗಳನ್ನು ಮಾಡಿದ್ದೆವೆ, ಸಿ ಎಮ್ ಯಡಿಯೂರಪ್ಪ ಅವರಿಗೂ ಕೇಳಿದ್ದೆವೆ.
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೌಮ್ಯ ಅವರು, ಅದರ ಬಗ್ಗೆ ನಾನೇನು ಹೇಳಲ್ಲ, ಅವರಿಗೆ ಜವಾಬ್ದಾರಿ ಇದೆ, ನಾವು ಬಹಳ ನಂಬಿಕೆ ಇಟ್ಕೊಂಡಿದ್ದೆವೆ. ಕೇಂದ್ರ ಸರ್ಕಾದಿಂದ ಆದ್ರು ಪರಿಹಾರ ಕೊಡ್ತಾರೆ ಎಂದು ನಿರೀಕ್ಷೆ ಇಟ್ಕೊಂಡಿದ್ದೆವೆ. ಅಧಿವೇಶನ ಅ.೧೦ ರಂದು ಆರಂಭವಾಗುತ್ತೆ, ಇಷ್ಟು ದಿನ ಎಲ್ಲರೂ ಸಹಾಯ ಮಾಡಿದ್ದಾರೆ.
ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಅದರ ಜವಾಬ್ದಾರಿ ಇದೆ. ನಾವು ಪ್ರತಿಭಟನೆ ನಡೆಸ್ತಾಯಿದಿವಿ ಸರ್ಕಾರ ಪರಿಹಾರ ನೀಡುವವರೆಗೂ ಅದು ನಿಲ್ಲುವುದಿಲ್ಲ ಆದಷ್ಟ ಬೇಗ ಸರ್ಕಾರ ಪರಿಹಾರ ನೀಡಲಿ ಎಂದು ಮನವಿ ಮಾಡಿದ್ದಾರೆ.