ಒಂದೇ ಒಂದು ಟ್ರ್ಯಾಕ್ಟರ್ ಇಂಜಿನ್ ನಿಂದ ಆರು ಡಬ್ಬಿ ಕಬ್ಬು ಸಾಗಾಟ….!

ಅಬ್ಬಬ್ಬಾ..ಅಂದ್ರೆ ಒಂದು ಟ್ರ್ಯಾಕ್ಟರ್ ನಿಂದ ಕಬ್ಬು ಎಷ್ಟು ಸಾಗಾಟ ಮಾಡಬಹುದು ಹೇಳಿ.. ಒಂದು ಡಬ್ಬಿ.. ಎರಡು ಡಬ್ಬಿ.. ಹೋಗಲಿ ಮೂರು ಟ್ರಾಕ್ಟರ್ ಡಬ್ಬಿಗಳನ್ನ ಸಾಗಾಟ ಮಾಡಬಹುದು ಆದ್ರೆ ಇಲ್ಲೊಬ್ಬ ಬರೋಬ್ಬರಿ ಒಂದೇ ಒಂದು ಟ್ರ್ಯಾಕ್ಟರ್ ಇಂಜಿನ್ ನಿಂದ ಆರು ಡಬ್ಬಿ ಕಬ್ಬು ಸಾಗಾಟ ಮಾಡಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಿಂದ 10 ಕಿ.ಮೀ ನಷ್ಟು ದೂರವನ್ನು ಸಾಗಿ ದಾಖಲೆ ಮಾಡಿದ್ದಾರೆ . 6 ಡಬ್ಬಿಗಳಲ್ಲಿ ಏನಿಲ್ಲವೆಂದರೂ 120 ಟನ್ ಗೂ ಹೆಚ್ಚು ಕಬ್ಬು ಸಾಗಾಟ ಮಾಡಲಾಗಿದೆ.

ಇಂತಹದೊಂದು ಸಾಹಸ ಮಾಡಿರೋದು ಇದೆ. ಈ ಡ್ರೈವರ್ ನ ಸಾಹಸ ಯಾವುದೇ ಲಿಮ್ಕಾ, ಗಿನ್ನಿಸ್ ದಾಖಲಾಗಿಲ್ಲದಿದ್ದರೂ ಅನ್ನದಾತನ ಮನದಾಳದಲ್ಲಿ, ಹೃದಯದಲ್ಲಿ ಅಚ್ಚಳಿಯದೇ ಉಳಿಯುವಂತಹ ಸಾಹಸ, ಸಾಧನೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights