ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್‌ಗೆ ಚಾಕು ಹಿರಿತ…!

ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್‌ಗೆ ಚಾಕುವಿನಿಂದ ಹಿರಿದ ಘಟನೆ ಬನ್ನಿಮಂಟಪದ ಕಾರ್ಯಕ್ರಮದಲ್ಲಿ ನಡೆದಿದೆ.

ಫರಾನ್ ( 24 ) ಎಂಬ ಯುವಕನಿಂದ ಕೃತ್ಯ ಎಸಗಲಾಗಿದೆ. ಬನ್ನಿಮಂಟಪದ ಕಾರ್ಯಕ್ರಮದಲ್ಲಿ ರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಭಾಗವಹಿಸಿದ್ದ ವೇಳೆ ಯುವಕ ಹಲ್ಲೆ ಮಾಡಿದ್ದಾನೆ.

ಕುತ್ತಿಗೆ ಭಾಗಕ್ಕೆ ಚಾಕು ಹಾಕಲಾಗಿದೆ. ತನ್ವೀರ್ ಸೇಠ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಫರಾನ್ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಫರಾನ್ ಹಲ್ಲೆ ಮಾಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಫರಾನ್ SDPI ಕಾರ್ಯಕರ್ತ ಎನ್ನುವ ವಿಚಾರ ತಿಳಿದು ಬಂದಿದೆ. ಸ್ಥಳಕ್ಕೆ ನಗರ‌ ಪೊಲೀಸ್ ಆಯುಕ್ತರಾದ ಕೆ.ಟಿ ಬಾಲಕೃಷ್ಣ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಸಕ ತನ್ವೀರ್ ಸೇಠ್‌ಗೆ ಚಿಕಿತ್ಸೆ ಮುಂದುವರಿದಿದೆ.

ಘಟನೆ ಹೇಗಾಯ್ತು :- 

ಕಳೆದ ರಾತ್ರಿ ಸುಮಾರು 11.30 ಗಂಟೆಗೆ ಬನ್ನಿಮಂಟಪದಲ್ಲಿ ಶಾಸಕರು ಆಪ್ತರ ಮದುವೆಯಲ್ಲಿ ಶಾಸಕರು ಭಾಗಿಯಾಗಿದ್ರು
ಬನ್ನಿಮಂಟಪದ ಆವರಣದಲ್ಲಿ ಮದುವೆ ನಡೆಯುತ್ತಿತ್ತು. ಸಮಾರಂಭದಲ್ಲಿ ಕುಳಿತಿದ್ದ ಶಾಸಕರ ಮೇಲೆ ಚಾಕುವಿನಿಂದ ಹಿರಿದಿದ್ದಾನೆ. ಚಾಕುವಿನಿಂದ ಹಿರಿದು ಪರಾರಿಯಾಗಲು ಯತ್ನಿಸಿದ್ದಾನೆ‌. ಆತನನ್ನ ಸ್ಥಳಿಯರು ಹಿಡಿದು ಪೊಲೀಸರು ವಶಕ್ಕೆ ಕೊಟ್ಟಿದ್ದಾರೆ.

ಹಲ್ಲೆ ಮಾಡಿದ ಯುವಕ ಫರಾನ್ ಪಾಷ ಮೈಸೂರಿನ ಕೆ.ಎಂ.ಹಳ್ಳಿ ನಿವಾಸಿ. ಆತ ಹ್ಯಾಂಡ್ ಕ್ರಾಫ್ಟ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆತನನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಎಲ್ಲಾ ರೀತಿಯಲ್ಲು ತನಿಖೆ ನಡೆಯುತ್ತಿದೆ.
ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights