ಕಿಲ್ಲರ್ ಕೊರೊನಾಗೆ ಬಲಿಯಾಗ್ತಾಯಿದೆ ಭಾರತ : ಒಂದೇ ದಿನ 1,118 ಪ್ರಕರಣಗಳು ಪತ್ತೆ!

ಲಾಕ್ ಡೌನ್ ಮುಂದುವರೆಯುತ್ತಿದ್ದಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗಯತ್ತಲೇ ಇದೆ. ಆತಂಕಾರಿ ವಿಚಾರ ಅಂದರೆ ದೇಶದಲ್ಲಿ ಒಂದೇ ದಿನ ಅಮದರೆ ಮಂಗಳವಾರ ಸಂಜೆಯಿಂದ ಬುಧುವಾರ ಸಂಜೆಯವರೆಗೆ 1,118 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯಕೀಯ ಲೋಕವನ್ನೇ ತಲ್ಲಣಗೊಳಿಸಿದೆ.

ಹೌದು.. ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರ ನಿದ್ದೆಗೆಡಿಸಿದೆ. ಒಂದೇ ದಿನ 1118 ಪ್ರಕರಣಗಳು ದಾಖಲಾಗಿದ್ದು ಭಾರತದಲ್ಲಿ ಇದೇ ಮೊದಲು. ಭಾರತದಲ್ಲಿ ಈವರೆಗೆ 11,933 ಪ್ರಕರಣ ದಾಖಲಾಗಿದೆ. ಈ ಪೈಕಿ 10,197 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1,343 ಜನರು ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ ಒಟ್ಟು 39 ಸಾವು ಸಂಭವಿಸಿದೆ. ಈ ಪೈಕಿ ಮಹಾರಾಷ್ಟ್ರ 18, ಉತ್ತರ ಪ್ರದೇಶ 6, ಗುಜರಾತ್ 4 ​, ಮಧ್ಯಪ್ರದೇಶ 3, ದೆಹಲಿ ಹಾಗೂ ಕರ್ನಾಟಕದಲ್ಲಿ ತಲಾ 2, ತೆಲಂಗಾಣ, ತಮಿಳುನಾಡು, ಪಂಜಾಬ್​ ಹಾಗೂ ಮೇಘಾಲಯದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ದೇಶದಲ್ಲಿ ಕೊರೋನಾ ಪ್ರಕರಣಗಳು 11 ಸಾವಿರ ಗಡಿ ದಾಟಿದ್ದು, 380ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಸಾವಿನ ಪ್ರಕರಣ ಮುಂಬೈ, ಪುಣೆ, ದೆಹಲಿ, ಇಂದೋರ್ ಈ ನಗರಗಳಲ್ಲೇ ಸಂಭವಿಸಿದೆ. ಮುಂಬೈನಲ್ಲಿ 112, ಪುಣೆಯಲ್ಲಿ 35, ಇಂದೋರ್ ನಲ್ಲಿ 37 ಮತ್ತು ದೆಹಲಿಯಲ್ಲಿ 30 ಜನ ಸಾವನ್ನಪ್ಪಿದ್ದಾರೆ. ಈ 4 ನಗರಗಳಲ್ಲಿ 214 ಮಂದಿ ಸಾವಿಗೀಡಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights