ಕೊರೊನಾ ಜಾಗೃತಿ ಮೂಡಿಸುವ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು…!

ಕೊರೊನಾ ಜಾಗೃತಿ ಮೂಡಿಸುವ ವಿಡಿಯೋ ನೋಡ ನೆಟ್ಟಿಗರು ಭಾವುಕರಾಗಿದ್ದಾರೆ. ಸೌದಿ ಅರೇಬಿಯಾದ ವೈದ್ಯ ತಂದೆ ಆಸ್ಪತ್ರೆಯಿಂದ ಬಂದ ತನ್ನ ಮಗುವನ್ನು ತಬ್ಬಿಕೊಳ್ಳಲಾಗದೇ ಕಣ್ಣೀರಿಟ್ಟ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಸೋಂಕು ಯಾವುದೇ ತಡೆಗೋಡೆ ಇಲ್ಲದೇ ಮನುಷ್ಯನ ದೇಹ ಸೇರುತ್ತಿರುವ ಯಮನಂತೆ ಜೀವ ಬಲಿಗಾಗಿ ಕಾಯುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಈ ಸೋಂಕು ತಡೆಯಲು ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಆದರೂ ಕೆಲ ಪುಂಡರು ಹೊರಗಡೆ ಬಂದು ಸೋಂಕು ಹರಡಲು ಬೇಕಾದ ಕೆಲಸಗಳನ್ನ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಗುಂಪಾಗಿ ನಿಲ್ಲುವುದು, ಅಂಗಡಿ ಮುಗ್ಗಟ್ಟುಗಳಲ್ಲಿ ಜೊತೆ ಜೊತೆಯಾಗಿ ನಿಲ್ಲುವುದು, ಗುಂಪು ಗುಂಪಾಗಿ ಸೇರುವುದು ಸರ್ವೇ ಸಾಮಾನ್ಯವಾಗಿದೆ. ಇವರನ್ನ ಚದುರಿಸಲು, ಸೋಂಕಿತರಿಗೆ ಚಿಕತ್ಸೆ ನೀಡವುದು, ಜಾಗೃತಿ ಮೂಡಿಸಲು ಮಾದ್ಯಮದವರು ಹಗಲು ರಾತ್ರಿ ನಿದ್ದೆ ಇಲ್ದೆ, ಮನೆಗಳಿಗೆ ಹೋಗದೆ ಪರಿಶ್ರಮಪಡುತ್ತಿದ್ದಾರೆ. ರಾಜಕಾರಣಿಗಳು, ಇನ್ನೂ ಕೆಲವರು ಸಹಾಯ ಹಸ್ತ ಚಾಚಿದರೂ ಜನ ಹೊರಬರುವುದು ಬಿಟ್ಟಿಲ್ಲ.

ಆದರೆ ಇಂತವರು ಈ ವಿಡಿಯೋ ನೋಡಿದ್ರೆ ಕೊಂಚ ಮಟ್ಟಿಗೆ ಹೊರಬರುವುದು ನಿಯಂತ್ರಣಕ್ಕೆ ಬರಬಹುದುದೇನೋ..? ಅಷ್ಟಕ್ಕೋ ಆ ವಿಡಿಯೋದಲ್ಲಿರುವ ಸಂದರ್ಭ ಎಂಥದ್ದು ಗೊತ್ತಾ..?

‘ಸೌದಿ ಅರೇಬಿಯಾದಲ್ಲಿ ವೈದ್ಯರೊಬ್ಬರು ಆಸ್ಪತ್ರೆಯಿಂದ ತಮ್ಮ ಮನೆಗೆ ಹೋಗುತ್ತಾರೆ. ಆಗ ಅವರು ತಮ್ಮ ಮಗನನ್ನು ದೂರ ಇರು ಎಂದು ಹೇಳಿ ಅಳುತ್ತಾ ಕೆಳಗೆ ಕೂತರು ಎಂದು ಮೈಕ್ ಎಂಬವರು ಬರೆದು ಟ್ವೀಟ್ ಮಾಡಿದ್ದಾರೆ.

ಆದರೆ ಈ ವಿಡಿಯೋವೊಂದನ್ನ ಜನ ಜಾಗೃತಿಗಾಗಿ ಸೃಷ್ಟಿಸಲಾಗಿದೆ ಎಂದೇಳಲಾಗುತ್ತಿದೆ. ಇದು ಕ್ರಿಯೇಟೆಡ್ ವಿಡಿಯೋ ಆದರೂ ಕೂಡ ಅದೆಷ್ಟೋ ವೈದ್ಯರು ಮನೆಗೆ ಹೋದಾಗ ಇದೇ ರೀತಿ ವರ್ತಿಸುವುದು ಅನಿವಾರ್ಯವಾಗಿದೆ. ಇಂತಹ ನೈಜ್ಯ ದೃಶ್ಯಗಳನ್ನು ವಿಡಿಯೋ ಮಾಡುವುದಿರಲಿ ನೋಡಲು ಕೂಡ ಸಿಗುವುದಿಲ್ಲ. ಅದೆಷ್ಟೋ ವೈದ್ಯರು ಮನೆಗಳಿಗೇ ಹೋಗದ ಸ್ಥಿತಿ ಇದೆ. ಮನೆ ಜನರೊಂದಿಗೆ ಮಾತನಾಡುವಷ್ಟು ಸಮಯ ಕೂಡ ಇಲ್ಲ. ಇನ್ನೂ ನೋಡುವುದಂತೂ ದೂರದ ಮಾತು. ಹೀಗಿರುವಾ ನಾವು ನಮ್ಮ ಬಗ್ಗೆ ಕಾಳಜಿ ವಹಿಸಿದ್ದರೆ ವೈದ್ಯರಿಗೆ ಇಂಥಹ ಸ್ಥಿತಿಯಾದ್ರೂ ಯಾಕೆ ಬರುತ್ತೆ ಅಲ್ವಾ…? ನಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡು ಬೇರೆಯವರ ಪ್ರಾಣದ ಜೊತೆ ಆಟ ಆಡುವುದು ಎಷ್ಟರ ಮಟ್ಟಿಗೆ ಸರಿ..? ಇದನ್ನ ಬುದ್ದೀವಂತರು, ವಿದ್ಯಾವಂತರು ಯೋಚನೆ ಮಾಡಬೇಕಿದೆ. ಸಮಾಜದ ಹಿತಕ್ಕಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights