ಕೊರೊನ ಪ್ರತ್ಯೇಕತೆ ನಿಯಮ ಮುರಿದು ಉತ್ತರಪ್ರದೇಶಕ್ಕೆ ಹಿಂದಿರುಗಿದ ಕೇರಳ ಐಎಎಸ್ ಅಧಿಕಾರಿ

ಕಳೆದ ವಾರ ಸಿಂಗಪುರ್ ನಿಂದ ಹಿಂದಿರುಗಿದ್ದ 2016 ರ ಬ್ಯಾಚ್ ನ ಐಎಎಸ್ ಅಧಿಕಾರಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕಿದ್ದ ನಿಯಮ ಮುರಿದು, ತಪ್ಪಿಸಿಕೊಂಡು ಉತ್ತರಪ್ರದೇಶಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಕೊಲ್ಲಂ ಜಿಲ್ಲೆಯ ಉಪ ಕಲೆಕ್ಟರ್ ಆಗಿ ಅವರನ್ನು ನೇಮಿಸಲಾಗಿತ್ತು.

30 ವರ್ಷದ ಅನುಪಮ್ ಮಿಶ್ರ ಸಿಂಗಪುರ್ ಇಂದ ಮಾರ್ಚ್ 19 ರಂದು ಬೆಂಗಳೂರಿಗೆ ಬಂದು ನಂತರ ಕೊಲ್ಲಂಗೆ ತೆರಳಿದ್ದರು. “ಫೆಬ್ರವರಿಯಲ್ಲಿ ಅವರು ಮದುವೆಯಾಗಿದ್ದರು ನಂತರ ತಮ್ಮ ಪತ್ನಿಯೊಂದಿಗೆ ಅವರು ಸಿಂಗಪುರ್ ಗೆ ತೆರಳಿದ್ದರು” ಎಂದು ಜಿಲ್ಲ ಕಲೆಕ್ಟರ್ ಅಬ್ದುಲ್ ನಾಸೆರ್ ದ ಪ್ರಿಂಟ್ ಗೆ ಹೇಳಿದ್ದಾರೆ. “ಅವರು 19 ಮಾರ್ಚ್ ಹಿಂದಿರುಗಿದ್ದರು. ತಮ್ಮ ನಿವಾಸದಲ್ಲಿ ಕೆಲವು ದಿನಗಳವರೆಗೆ ಪ್ರತ್ಯೇಕವಾಗಿ ಇರುವಂತೆ ತಿಳಿಸಿದ್ದೆ… ಆದರೆ ತಮ್ಮ ಅಧಿಕೃತ ಗೃಹ ತೊರೆದು, ಅವರ ಪತ್ನಿಯ ಜೊತೆಗೆ ಬೆಂಗಳೂರಿನ ಅವರ ಸಹೋದರ ವೈದ್ಯನ ಮನೆಗೆ ತೆರೆಳಿದ್ದಾರೆ” ಎಂದು ತಿಳಿಸಿದ್ದಾರೆ. ಅಲ್ಲಿಂದ ಅವರು ಕಾನ್ ಪುರಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

“ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದೆ ಇದ್ದರೂ, ಪ್ರತ್ಯೇಕವಾಗಿ ಉಳಿಯಬೇಕಾಗಿರುವುದು ನಿಯಮ” ಎಂದಿರುವ ನಾಸೆರ್ “ಅವರಿಗೆ ಪ್ರತ್ಯೇಕವಾಗಿರುವುದರ ಬಗ್ಗೆ ಗೊಂದಲ ಆಗಿರಬಹುದು … ಅಥವಾ ಅವರ ಊರಿನ ಸ್ವಗೃಹದಲ್ಲಿ ಮಾತ್ರ ಪ್ರೆತ್ಯೇಕವಾಗಿ ಇರಬೇಕು ಅಂದುಕೊಂಡಿರಬಹುದು, ಆದರೆ ಯಾರಿಗೂ ತಿಳಿಸದೇ ಓಡಿಹೋಗಿದ್ದಾರೆ” ಎಂದಿದ್ದಾರೆ.

ಈ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಹೆಚ್ಚಿನ ಒತ್ತಡ ಬಿದ್ದಿದೆ. ಕೇರಳದಲ್ಲಿ ಅತಿ ಹೆಚ್ಚು ಕೊರೊನ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈ ಹಿಂದೆ ಮದ್ಯಪಾನ ಮಾಡಿ ಪತ್ರಕರ್ತನ ಮೇಲೆ ಗಾಡಿ ಚಲಾಯಿಸಿದ್ದ ಕಾರಣಕ್ಕೆ ವಜಾಗೊಂಡು ಮತ್ತೆ ಈ ಅಧಿಕಾರಿಯನ್ನು ಕೆಲಸಕ್ಕೆ ವಾಪಸ್ ಕರೆದುಕೊಳ್ಳಲಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights