ಕೋಮಾ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ ಛತ್ತಿಸ್‌ಗಡ ಮಾಜಿ ಸಿಎಂ ಅಜಿತ್‌ಜೋಗಿ

ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಛತ್ತೀಸ್​ಗಡ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಆರೋಗ್ಯ ಇನ್ನಷ್ಟು ತೀಕ್ಷ್ಣವಾಗಿದೆ ಇಂದು ಅವರು ಕೋಮಾ ರೀತಿಯ ಸ್ಥಿತಿಗೆ ಜಾರಿದ್ದಾರೆ ಎಂದು  ರಾಯಪುರ್​ನ ಶ್ರೀ ನಾರಾಯಣ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ಧಾರೆ.

ಅಜಿತ್ ಜೋಗಿ ಅವರ ನರ ವ್ಯೂಹದ ಚಟುವಟಿಕೆ ಬಹುತೇಕ ಸ್ತಬ್ಭಗೊಂಡಿದೆ. ವೆಂಟೆಲೇಟರ್​ನಲ್ಲೇ ಅವರನ್ನ ಇರಿಸಲಾಗಿದೆ. ಅವರ ಹೃದಯ ಬಡಿತ ಸದ್ಯಕ್ಕೆ ಸಹಜವಾಗಿದೆ. ಔಷಧಗಳ ಮೂಲಕ ರಕ್ತದೊತ್ತಡವನ್ನು ಹತೋಟಿಗೆ ತೆಗೆದುಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಹೃದಯಾಘಾತವಾದ ಬಳಿಕ ಜೋಗಿ ಅವರ ಮಿದುಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಅವರ ಮಿದುಳಿಗೆ ಹಾನಿಯಾಗಿರಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುನೀಲ್ ಖೇಮ್ಕ ತಿಳಿಸಿದ್ದಾರೆ.

“ಅವರು ಕೋಮಾಗೆ ಜಾರಿದ್ದಾರೆಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಸಹಾಯದಲ್ಲಿದ್ದಾರೆ. ಅವರ ಆರೋಗ್ಯ ಸುಧಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸದ್ಯಕ್ಕಂತೂ ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದೆ” ಎಂದು ವೈದ್ಯರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

74 ವರ್ಷದ ಅಜಿತ್ ಜೋಗಿ ಅವರು ನಿನ್ನೆ ಬೆಳಗ್ಗೆ ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಜೋಗಿಗೆ ಹೃದಯಸ್ತಂಭನವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

2000ದ ಇಸವಿಯಲ್ಲಿ ಛತ್ತೀಸ್​ಗಡ ರಾಜ್ಯ ನಿರ್ಮಾಣವಾದಾಗ  ಅಜಿತ್ ಜೋಗಿ ಅವರು ಮೊತ್ತ ಮೊದಲ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ನಾಯಕರಾಗಿದ್ದ ಅವರನ್ನು ಕೆಲ ವರ್ಷಗಳ ಹಿಂದೆ ಉಚ್ಛಾಟಿಸಲಾಗಿತ್ತು. ಆ ನಂತರ ಅವರು ಜನತಾ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights