ಕ್ಯಾತನಮಕ್ಕಿ ಗುಡ್ಡದಲ್ಲಿ ಸೂರ್ಯಾಸ್ತದ ಕಲರವ : ಪ್ರಕೃತಿ ಮಡಿಲಲ್ಲಿ ಸೂರ್ಯಾಸ್ತದ ಹಬ್ಬ..

ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ನಾವು ಎಷ್ಟೇ ವರ್ಣಿಸಿದ್ದರೂ ಬಣ್ಣಿಸಿದ್ದರೂ ಅದು ಪದಗಳಿಗೆ ನಿಲುಕದು. ಪ್ರಕೃತಿಯ ಐಸಿರಿ ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದವನ್ನು ನೀಡುತ್ತದೆ. ಇನ್ನು ರಮಣೀಯ ಪ್ರಕೃತಿಯ ಮಧ್ಯೆ ನಿಂತು ಸೂರ್ಯೋದಯ, ಸೂರ್ಯಾಸ್ತವನ್ನು ಕಣ್ತುಂಬಿಸಿಕೊಳ್ಳುವುದು ನಿಜಕ್ಕೂ ಸೌಭಾಗ್ಯವೇ ಸರಿ.. ಅಂತದೊಂದು ನಯನಮನೋಹರ ತಾಣದ ಪರಿಚಯ ನಿಮಗಾಗಿ.

ಆಕಾಶದಲ್ಲಿ ಮರೆಯಾಗ್ತಿರೋ ಜಗದೊಡೆಯ, ಸೈಲೆಂಟಾಗಿ ಮರೆಯಾಗ್ತಿರೋ ಸೂರ್ಯನನ್ನು ಸೆರೆಹಿಡಿಯಲು ಪ್ರವಾಸಿಗಳ ಹರಸಾಹಸ, ಆತನ ಜೊತೆಯಲ್ಲೇ ಸೆಲ್ಫಿ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳೋ ತವಕ.. ಸುತ್ತಮುತ್ತಲು ಎಲ್ಲಿ ನೋಡಿದರು ಹಸಿರಿನ ಹೊನಲು.. ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಾಳಿಗುಡ್ಡ. ಆದರೆ ಸ್ಥಳೀಯವಾಗಿ ಇದನ್ನ ಕ್ಯಾತನಮಕ್ಕಿ ಗುಡ್ಡ ಅಂತಲೇ ಕರೆಯುತ್ತಾರೆ.. ಈ ಕ್ಯಾತನಮಕ್ಕಿ ಗುಡ್ಡದಲ್ಲಿ ನಿಂತ್ಕೊಂಡು ಸೂರ್ಯಾಸ್ತ, ಸೂರ್ಯೋದಯವನ್ನ ನೋಡೋದೇ ಕಣ್ಣಿಗೆ ಹಬ್ಬ.. ಸನ್ಸೆಟ್ ನೋಡಕಂತೂ ಪ್ರವಾಸಿಗರ ದಂಡೇ ಹರಿದು ಬರುತ್ತೆ.. 360 ಡಿಗ್ರಿ ಸುತ್ತಲೂ ಕಣ್ಣುಹಾಯಿಸಿದ್ರೂ ಹಸಿರ ಸಿರಿ ಕಣ್ಣಿಗೆ ರಸದೌತಣವನ್ನ ಬಡಿಸುತ್ತದೆ. ಸುತ್ತಲೂ ಇರೋ ಗುಡ್ಡಗಳ ರಾಶಿ ಮತ್ತೊಂದು ಪ್ರಪಂಚವನ್ನೇ ಪರಿಚಯಿಸುತ್ತದೆ. ಇಂತಹ ವಿಹಂಗಮ ಸ್ಪಾಟಲ್ಲಿ ನಿಂತು ಸೂರ್ಯೋದಯವನ್ನ ಎಂಜಾಯ್ ಮಾಡೋದೇ ಒಂದು ಸೌಭಾಗ್ಯ…

ಈ ಸ್ಪಾಟಲ್ಲಿ ನಿಂತು ಸನ್ಸೆಟ್ ನೋಡಕ್ಕೆಂದು ದೂರದೂರುಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಗಾಳಿ ಗುಡ್ಡಕ್ಕೆ ಕಳಸ ಹೊರನಾಡು ಮಾರ್ಗವಾಗಿಯೂ ತಲುಪಬಹುದು. ಬಸರಿಕಟ್ಟೆ ಮಾರ್ಗವಾಗಿಯೂ ರೀಚ್ ಆಗಬಹುದು.. ಆದರೆ ಗಾಳಿಗುಡ್ಡದ ಸಮೀಪ ಸುಮಾರು ಎರಡು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜೀಪ್, ಪಿಕ್ಕಪ್ ಗಳಲ್ಲಿ ಮಾತ್ರ ಪ್ರಯಾಣಿಸಬಹುದಾಗಿದೆ. ಹಾಗಾಗಿ ಇಲ್ಲಿಗೆ ಬರೋ ಬಹುತೇಕರು ದುರ್ಗಮ ದಾರಿಯಲ್ಲಿ ಸಾಹಸಮಯ ಜರ್ನಿಯಲ್ಲಿ ಬಂದು ಸೇಫಾಗೋದು ನಿಜಕ್ಕೂ ಒಂದು ಸವಾಲು..

ಮ್ಯಾರೇಜ್ ಫ್ರೀ ವೆಡ್ಡಿಂಗ್ ಶೂಟಿಂಗ್ ಸೇರಿದಂತೆ ಅದೆಷ್ಟೋ ಕನ್ನಡ ಸಿನಿಮಾಗಳಿಗೆ ಈ ಸ್ಪಾಟ್ ಜೀವ ತುಂಬಿದೆ. ಭೂಲೋಕದ ಸ್ವರ್ಗದಂತಿರೋ ಈ ಸ್ಥಳದಿಂದ ನೋಡಿದ್ರೆ, ಸೂರ್ಯ ಕೆಲವೇ ಕೆಲವು ಮೀಟರ್ಗಳ ದೂರ ಇದ್ದಂಗೆ ಭಾಸವಾಗುತ್ತೆ. ಸೂರ್ಯಸ್ತವನ್ನ ನೋಡನೋಡುತ್ತಲೆ ಸೂರ್ಯ ಮರೆಯಾಗಿ ಹೋಗುತ್ತಾನೆ.. ಈ ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗೋಕೆ ಪ್ರವಾಸಿಗರು ಹಾತೊರೆಯುತ್ತಾರೆ. ಇಂತಹ ಚೆಂದದ ಸ್ಥಳದಲ್ಲಿ ಸೂರ್ಯೋದಯದ ವಿಹಂಗಮ ನೋಟವನ್ನು ಕಣ್ ತುಂಬಿಸಿಕೊಂಡ್ರೆ ಮನಸ್ಸಿಗೆ ಅದೆಷ್ಟೋ ಹಗುರವಾದ ಅನುಭವ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights