ಪೆಟ್ರೋಲ್ಗೆ ಹೆಚ್ಚು ತೆರಿಗೆ ವಿಧಿಸುವ ದೇಶ ಭಾರತ! ಉಳಿದ ರಾಷ್ಟ್ರಗಳ ತೆರಿಗೆ ಪ್ರಮಾಣವೆಷ್ಟು?
ಲಾಕ್ಡೌನ್ನಿಂದಾಗಿ ಆರ್ಥಿಕತೆ ಕುಸಿಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಹಿಂದೆಂದೂ ಕಾಣದ ಮಟ್ಟಿಗೆ ಏರಿಸಿದೆ. ಒಂದು ಲೀಟರ್ ಪೆಟ್ರೋಲ್ಗೆ 10 ರೂ ಹಾಗೂ ಒಂದು ಲೀಟರ್ ಡೀಸೆಲ್ಗೆ 13 ರೂಗಳಷ್ಟು ಭಾರಿ ಮೊತ್ತದ ಅಬಕಾರಿ ಸುಂಕವನ್ನು ಏರಿಕೆ ಮಾಡುವ ನಿಯಮ ಕೇಂದ್ರ ಸರ್ಕಾರ ಜಾರಿಗೆ ತಂತಿದೆ. ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅತಿ ಹೆಚ್ಚು ತೆರೆಗೆ ವಿಧಿಸುವ ರಾಷ್ಟ್ರ ಎನ್ನುವ ಹಣೆಪಟ್ಟಿಯನ್ನು ಭಾರತ ಪಡೆದುಕೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟಿಯಲ್ಲಿ ಕಚ್ಚಾತೈಲದ ಬೆಲೆ ಪಾತಾಳಕ್ಕೆ ಕುಸಿದಿದ್ದರೂ, ಅದರ ಲಾಭವನ್ನು ಕೇಂದ್ರ ಸರ್ಕಾರ ಗ್ರಾಹಕರಿಗೆ ನೀಡುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತಷ್ಟು ಏರಿಸಿದೆ. ಈ ಮೂಲಕ ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ ಗ್ರಾಹಕರು ಶೇ.69 ರಷ್ಟು ಟ್ಯಾಕ್ಸ್ ಪಾವತಿಸಬೇಕಿದೆ.
ಪೆಟ್ರೋಲ್ ಹಾಗೂ ಡೀಸೆಲ್ಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರಗಳ ಪೈಕಿ ಇಟಲಿ ಮೊದಲ ಸ್ಥಾನದಲ್ಲಿತ್ತು. ಈ ರಾಷ್ಟ್ರದಲ್ಲಿ ಶೇ.64 ತೆರಿಗೆ ವಿಧಿಸಲಾಗುತ್ತಿದೆ. ಫ್ರಾನ್ಸ್ ಶೇ.63, ಜರ್ಮನಿ ಶೇ.63, ಇಂಗ್ಲೆಂಡ್ ಶೇ.62, ಸ್ಪೇನ್ ಶೇ.53, ಜಪಾನ್ ಶೇ.47, ಕೆನಡಾ ಶೇ.33 ಹಾಗೂ ಅಮೆರಿಕದಲ್ಲಿ ಶೇ.19 ತೆರಿಗೆ ವಿಧಿಸಲಾಗುತ್ತಿದೆ. ಈಗ ಈ ಎಲ್ಲ ರಾಷ್ಟ್ರಗಳನ್ನು ಭಾರತ ಹಿಂದಿಕ್ಕಿದೆ.
ಅಂದಹಾಗೆ, ಈಗ ವಿಧಿಸಿರುವ ತೆರಿಗೆ ಜನರ ಚಿಲ್ಲರೆ ವಹಿವಾಟಿಗೆ ಅನ್ವಯವಾಗುವುದಿಲ್ಲ. ಬದಲಾಗಿ ಈ ಬೆಲೆ ಏರಿಕೆ ಕೇವಲ ತೈಲ ಕಂಪೆನಿಗಳಿಗೆ ಮಾತ್ರ ಅನ್ವಯವಾಗಲಿದ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

