ಗೊಂದಲದ ಗೂಡಾದ ಆರೋಗ್ಯ ಇಲಾಖೆ : ಕೊರೊನಾ ಸೋಂಕಿಲ್ಲದ ಗರ್ಭಿಣಿಗೆ ಸೋಂಕು ವರದಿ ಸುಳ್ಳು

ಮಹಾಮಾರಿ ಕೊರೊನಾ ಸೋಂಕಿಗೆ ರಾಜ್ಯ ತತ್ತರಿಸಿ ಹೋಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಗೊಂದಲದ ಗೂಡಾಗಿದ್ದು, ಇದರ ಒಂದೊಂದು ಎಡವಟ್ಟುಗಳು ಬಯಲಾಗುತ್ತಿವೆ.

ಈ ಹಿಂದೆ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಇಲ್ಲದೇ ಇದೆ ಎಂದು ಹೇಳಿದ ಆರೋಗ್ಯ ಇಲಾಖೆ ಸದ್ಯ ಅಂಥಹದ್ದೇ ಮತ್ತೊಂದು ಎಡವಟ್ಟು ಮಾಡಿದೆ ಎನ್ನು ಆರೋಪ ಕೇಳಿ ಬಂದಿದೆ. ಈ ಹಿಂದೆ ಗರ್ಭಿಣಿಗೆ  ಸೋಂಕಿದೆ ಎಂದು ಹೇಳಲಾಗಿದ್ದ ವರದಿ ಇದೀಗ ಸುಳ್ಳು ಎಂದು ಹೇಳಲಾಗುತ್ತಿದ್ದು, ಗರ್ಭಿಣಿಗೆ ಸೋಂಕಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದರ ವರದಿಯಲ್ಲಿ ಹೇಳಲಾಗಿದೆ.

ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಸೋಂಕಿತ್ತು ಎಂದು ವರದಿಯಾದ 24 ಗಂಟೆಗಳ ಅವಧಿಯಲ್ಲೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು, ಖಾಸಗಿ ಲ್ಯಾಬ್  ಗಳ ವರದಿಗಳನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಬಿಟಿಎಂ ಲೇಔಟ್​ನ ಗರ್ಭಿಣಿಗೆ ಕೊರೋನಾ ಪಾಸಿಟಿವ್ ಅಂತಾ ರಿಪೋರ್ಟ್ ಬಂದಿತ್ತು. ಆದರೆ ನಿನ್ನೆ ಗರ್ಭಿಣಿಗೂ ಸೋಂಕೇ ತಗುಲಿಲ್ಲ ಅನ್ನೋ ಸ್ಫೋಟಕ ಸಂಗತಿ ಬಯಲಾಗಿದೆ. ಈ ಕೇಸ್​​ನಲ್ಲೂ ಆರೋಗ್ಯ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಖಾಸಗಿ ಲ್ಯಾಬ್ ಕೊಟ್ಟ  ಸುಳ್ಳು ರಿಪೋರ್ಟ್​ನಿಂದ ಗರ್ಭಿಣಿ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್​ಗೆ ಶಿಫ್ಟ್ ಆಗಿದ್ದರು. ಮತ್ತೊಮ್ಮೆ ಸರ್ಕಾರಿ ಲ್ಯಾಬ್​ನಲ್ಲಿ ಸ್ಯಾಂಪಲ್ ಪರೀಕ್ಷಿಸಿದಾಗ ನೆಗೆಟಿವ್ ರಿಪೋರ್ಟ್​ ಬಂದಿದೆ. ಇದೀಗ ಮತ್ತೆ 14 ದಿನಗಳ ಕಾಲ ಗರ್ಭಿಣಿಗೆ ಕ್ವಾರಂಟೈನ್ ವಿಧಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights