ಜೀವನಲ್ಲಿ ಒಂದಾದ ಜೋಡಿ : ಸಾವಿನಲ್ಲೂ ಒಂದಾಯ್ತು…!
ಜೀವನದಲ್ಲಿ ಪರಸ್ಪರ ಕೈಹಿಡಿದ ಜೋಡಿ ಈಗ ಸಾವಿನಲ್ಲೂ ಒಂದಾಗಿ ಎಲ್ಲರಿಗೂ ಆಶ್ಚರ್ಯದ ಜೊತೆಗೆ ಅಧಿಕ ನೋವನ್ನುಂಟು ಮಾಡಿದೆ.
ಹೌದು.. ಇಂಥಹ ಘಟನೆಗಳು ಅಪರೂಪದಲ್ಲಿ ಅಪರೂಪ. ವೃದ್ಧ ದಂಪತಿ ಇಬ್ಬರು ಸಾವಿನಲ್ಲೂ ಒಂದಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ.
ರೇವಣೆಪ್ಪ ಜಂಗಮಶೆಟ್ಟಿ, ಸಂಗನಬಸವ್ವ ಜಂಗಮಶೆಟ್ಟಿ ಸಾವಲ್ಲಿ ಒಂದಾದ ದಂಪತಿ. ನಿನ್ನೆ ರಾತ್ರಿ ಪತ್ನಿ ಸಾವನ್ನಪ್ಪಿದ ಬಳಿಕ ಇಂದು ಬೆಳಗಿನ ಜಾವ ಪತಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.