ಜೆಡಿಎಸ್ ಪಕ್ಷ ಸೋಲು ಹಿನ್ನಲೆ : ಜನರನ್ನು ಹೀನಾಯಮಾನ ನಿಂದನೆ…!

ಸೋಷೀಯಲ್ ಮೀಡಿಯಾದಲ್ಲಿ ಶುರುವಾದ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಗರ ವಾರ್ ಶುರುವಾಗಿದೆ. ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಪಡೆದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಫೇಸ್‍ಬುಕ್ ಖಾತೆಯಲ್ಲಿ ಕ್ಷೇತ್ರದ ಮತದಾರರನ್ನು ನಿಂದಿಸಿ ಪೋಸ್ಟ್ ಮಾಡಲಾಗಿದೆ.

ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಮೂಡಿರೋ ಹತಾಸೆ ಮನೋಭಾವವನ್ನ ಫೋಸ್ಟರ್ ಹಾಕುವ ಮೂಲಕ ಹೊರಹಾಕಿದ್ದಾರೆ.

ಕ್ಷೇತ್ರದಲ್ಲಿ ಪಕ್ಷ ಸೋತ ಕಾರಣಕ್ಕೆ ಕೆ.ಆರ್.ಪೇಟೆ ಜನರನ್ನು ಹೀನಾಯಮಾನ ನಿಂದನೆ ಮಾಡಲಾಗಿದೆ. ಸೋಷಿಯಲ್ ಮೀಡೀಯಾದಲ್ಲಿ ಕಾರ್ಯಕರ್ತರು ಕ್ಷೇತ್ರದ ಜನರನ್ನು ಅಸಹ್ಯಕರ ನಿಂದನೆ ಮಾಡ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಪೋರ್ಟರ್ಸ್ ಫೆಸ್ಬುಕ್ ಗ್ರೂಪ್ ನಲ್ಲಿ ಕ್ಷೇತ್ರದ ನಿಂದನೆ ಮಾಡಲಾಗಿದೆ.

ನಮ್ಮ ಜನ ನಮ್ಮ ಮತನ ಎಣ್ಣೆ ಬಿರ್ಯಾನಿಗೂ ಮಾರ್ಕೋಂಡ್ರು ಅನ್ನೋ ವಿಡಿಯೋ ಜೊತೆ ಅಶ್ಲೀಕರ ಟೈಟಲ್ ಹಾಕಲಾಗಿದೆ. ಫೇಸ್ಬುಕ್ ಮುಖಪುಟದಲ್ಲಿ ಹಾಕಿರೋ ಆ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಜೆಡಿಎಸ್ ಅಭಿಮಾನಿಗಳಿಂದ ಆ ವಿಡಿಯೋಗೆ ಹೆಚ್ಚಿನ ಲೈಕ್ ಕಾಮೆಂಟ್ ಗಳು ಹರಿದು ಬಂದಿವೆ.

ಪೋಸ್ಟ್ ಹಾಕಿರೋರಿಗೆ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ಬೇರೆ ಪಕ್ಷದವರಿಂದ ಸಖತ್ತಾಗೆ ತರಾಟೆ ತೆಗೆದುಕೊಳ್ಳಲಾಗಿದೆ. ಸೋತ ಹತಾಶೆಗೆ ಕ್ಷೇತ್ರದ ಜನರನ್ನು ದೂರಿ ಮತ್ತೊಂದು ಎಡವಟ್ಟು ಮಾಡಿಕೊಂಡು ಆಶ್ಲೀಲಕರ ಹೇಳಿಕೆಯ ಫೋಸ್ಟ್ ಗೆ  ಜೆಡಿಎಸ್ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights