ದರ್ಶನ್ ಪ್ರೀತಿಗೆ ಪಾತ್ರವಾಗಿದ್ದ ಬಸವ ಸಾವು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರೀತಿಗೆ ಪಾತ್ರವಾಗಿದ್ದ ಬಸವವೊಂದು ಸಾವನ್ನಪ್ಪಿದೆ. ಕೆ.ಆರ್‌.ನಗರದ ಕಾಳಪ್ಪನ ಕೊಪ್ಪಲಿನಲ್ಲಿದ್ದ ಬಸವ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಶುಕ್ರವಾರ ಬೆಳಗಿನ ಜಾವ ಸಾವನ್ನಪ್ಪಿದೆ.

ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕಾಗಿ  ಕೆ.ಆರ್. ನಗರದ ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ನಟ ದರ್ಶನ್ ತೆರಳಿದ್ದ ವೇಳೆ ಈ ಬಸವ ರಸ್ತೆಗೆ ಅಡ್ಡ ನಿಂತು ವಾಹನಗಳನ್ನು ತಡೆದಿತ್ತು. ದರ್ಶನ್ ಅವರ ಬಸವನೊಂದಿಗಿನ ಒಡನಾಟದ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.

ಆದರೆ ಕಳೆದ ಕೆಲ ದಿನಗಳ ಹಿಂದೆ ಹುಲ್ಲು ತಿನ್ನದೆ, ನೀರು ಕುಡಿಯದೆ ದೇವಸ್ಥಾನ ಆವರಣದಲ್ಲಿ ಮಲಗಿದ್ದ ಬಸವ ಅನಾರೋಗ್ಯಕ್ಕೀಡಾಗಿತ್ತು. ಈ ವಿಚಾರ ತಿಳಿದ ದರ್ಶನ್ ಬಸವನ ಚಿಕಿತ್ಸೆಗಾಗಿ ಮೈಸೂರು ಪಶುವದ್ಯರನ್ನು ಕರೆಸಿದ್ದರು. ಲಾಕ್‌ಡೌನ್‌ನಿಂದಾಗಿ ಆ ಊರಿಗೆ ಹೋಗಲು ಸಾಧ್ಯವಾಗದ ದರ್ಶನ್, ಬಸವನ ಚಿಕಿತ್ಸೆಗೆ ಸಾಕಷ್ಟು ಹಣ ಭರಿಸಲು ತಯಾರಿದ್ದರು.   ಆದರೆ ಚಿಕಿತ್ಸೆ ಫಲಿಸದ ಕಾರಣ ಕಾಳಮ್ಮನ ದೇವಸ್ಥಾನ ಆವರಣದಲ್ಲಿ ಬಸವ ಕೊನೆಯುಸಿರೆಳೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights