ನೆರೆ ಪರಿಹಾರಕ್ಕೆ ಖಜಾನೆ ಖಾಲಿ – ಬಿಎಸ್ವೈ ಹೇಳಿಕೆ ವಿರುದ್ಧ ತಿಮ್ಮಾಪುರ ವಾಗ್ದಾಳಿ
ನೆರೆ ಪರಿಹಾರಕ್ಕೆ ಖಜಾನೆ ಖಾಲಿ ಎಂದು ಸಿಎಂ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಬಿಎಸ್ವೈ ವಿರುದ್ಧ ಮಾಜಿ ಸಚಿವ ಆರ್. ಬಿ ತಿಮ್ಮಾಪುರ ವಾಗ್ದಾಳಿ ಮಾಡಿದ್ದಾರೆ.
ಸಿಎಂ ಬಿಎಸ್ವೈ ಹೇಳಿಕೆಯಿಂದ ರೈತಾಪಿ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ. ಕೇಂದ್ರ ಸರ್ಕಾರಕ್ಕೆ ಯಾಕೆ ಒತ್ತಡ ಹಾಕ್ತಿಲ್ಲ. ನಿಮಗೇನು ಭಯ ಇದೆ ಅನ್ನೋದು ರಾಜ್ಯದ ಜನ್ರಿಗೆ ಹೇಳ್ಬೇಕಾಗುತ್ತೆ. ಒಂದುಕಡೆ ಹಣ ಇಲ್ಲ ಅನ್ನೋದು, ಮತ್ತೊಂದೆಡೆ ಕೇಂದ್ರ ಸರ್ಕಾರ ಕೇಳಲು ಶಕ್ತಿಯಿಲ್ಲ. ನಿಮಗೆ ಸಾಧ್ಯವಾದ್ರೆ ಸಂತ್ರಸ್ತರಿಗೆ ಪರಿಹಾರ ಕೊಡ್ರಿ. ಸಾಧ್ಯವಾಗದಿದ್ರೆ ಸಿಎಂ ಬಿಎಸ್ವೈ ಕುರ್ಚಿ ತ್ಯಜಿಸಿ ಮನೆಗೆ ಹೋಗಿ ಎಂದು ತಿಮ್ಮಾಪುರ ಆಗ್ರಹಿಸಿದ್ದಾರೆ.
ನೆರೆ ಸಂಬಂಧ ಅಧಿಕಾರಿಗಳು ಕೊಟ್ಟ ರಿಪೋರ್ಟ್ ಬೇರೆ, ಸಿಎಂ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ರಿಪೋರ್ಟ್ ಬೇರೆ. ಬೇರೆ ಬೇರೆ ರಿಪೋರ್ಟ್ ನಿಂದ ಜನರ ಗೊಂದಲಕ್ಕಿಡಾಗುವಂತ ಕೆಲ್ಸ ಮಾಡುತ್ತಿದ್ದೀರಿ. ಇದನ್ನು ಜನ ಸಹಿಸೋದಿಲ್ಲ ಎಂದು ಕಿಡಿ ಕಾರಿದ್ದಾರೆ.