ಪರಪ್ಪನ ಅಗ್ರಹಾರದಲ್ಲಿ ಸಿಗೋ ತಟ್ಟೆ, ಲೋಟ, ಸೌಟ್ ನಿಂದ ಮಾರಕಸ್ತ್ರ..! : ಸಿಸಿಬಿ ಬಲೆಗೆ ಬಿದ್ದ ಕ್ರಿಮಿನಲ್ಸ್

ಪರಪ್ಪನ ಅಗ್ರಹಾರದಲ್ಲಿ ಸಿಗೋ ತಟ್ಟೆ, ಲೋಟ, ಸೌಟ್ ನಿಂದ ಮಾರಕಸ್ತ್ರ ತಯಾರಿಸಿದ ಕ್ರಮಿನಲ್ಸ್ ಸಿಸಿಬಿ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ.

ಆಶ್ಚರ್ಯ ಅನಿಸಿದ್ರು ಇದು ನಿಜಾನೇ. ಹೌದು.. ಮಾರಕಸ್ತ್ರಗಳನ್ನು ನೋಡಿದ್ರೆ ನೀವು ನಂಬಲಾಗದಂತಾ ರೀತಿಯಲ್ಲಿ ಅಷ್ಟೊಂದು ಅಚ್ಚಕಟ್ಟಾಗಿ ಕ್ರಿಮಿನಲ್ಸ್ ಮಾರಕಸ್ತ್ರಗಳನ್ನು ತಯಾರಿಸಿದ್ದಾರೆ. ಕೇವಲ ಮಾರಕಾಸ್ತ್ರಗಳು ಮಾತ್ರವಲ್ಲ ಜೈಲಿನಲ್ಲಿರುವ ಖೈದಿಗಳ ಬಳಿ ಮೊಬೈಲ್, ಗಾಂಜಾ ಕೂಡ ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ನಾನಾ ಪ್ರಕರಣಗಳಲ್ಲಿ ಜೈಲು ಪಾಲಾದರ ಖೈದಿಗಳು ಜೈಲಿನಲ್ಲೂ ತಮ್ಮ ಬುದ್ದಿ ತೋರಿಸಿದ್ದಾರೆ. ಇಂದು ಸಿಸಿಬಿ ದಾಳಿ ಸಮಯಕ್ಕೆ ಸರಿಯಾಗಿ ಜೈಲಿನಲ್ಲಿ ಕುಳಿತು ಖೈದಿಗಳು ಮಾರಕಾಸ್ತ್ರಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮಾರಕಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು. ಲೋಟ, ಸೌಟು ಬಳಸಿ ಡ್ಯಾಗರ್ ರೆಡಿ ಮಾಲಾಗಿದೆ. 37 ಚಾಕು, ಗಾಂಜಾ, ಮೊಬೈಲ್ ಫೋನ್ ಸಿಕ್ಕಿದೆ.

ಇವರು ಹೊರಗಿನವರೊಂದಿಗೆ ಸಂಪರ್ಕ ಕೂಡ ಹೊಂದಿದ್ದರು ಎನ್ನಲಾಗಿದೆ. ಚಾಕು ಯಾವ ರೀತಿ ಮಾಡಿದ್ದಾರೆ ಹಾಗೂ ಪೋನ್ ಯಾರಿಗೆ ಮಾಡಿದ್ದಾರೆ ಎಂದು ಮಾಹಿತಿ ಕಲೆ ಹಾಕುತ್ತೇವೆಂದಿದ್ದಾರೆ ಅಧಿಕಾರಿಗಳು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.