ಪರಸ್ಪರ ಅಂತರ ಕಾಯ್ದುಕೊಳ್ಳಲು ಹೊಸ ಪ್ಲಾನ್ : ಪಾಲಿಸದ್ದಿದ್ರೆ ಬೀಳುತ್ತೆ ಲಾಠಿ ಏಟು..!

ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸಲು ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಮಾಡುತ್ತಿರುವ ಕಸರತ್ತು ಒಂದಲ್ಲ ಎರಡಲ್ಲ. ಲಾಠಿ ಚಾರ್ಜ್ ಆಯ್ತು, ವಾಹನಗಳನ್ನು ವಶಕ್ಕೆ ಪಡೆದಿದ್ದು ಆಯ್ತು ಆದರೂ ಜನ ಹೊರಬರುವುದನ್ನ ಬಿಟ್ಟಿಲ್ಲ. ಜನ ಅಂತರವನ್ನೂ ಕಾಯ್ದುಕೊಳ್ಳಬೇಕು. ಜೊತೆಗೆ ಹೊರಗಡೆ ಬಂದು ಅವಶ್ಯಕ ವಸ್ತುಗಳನ್ನೂ ಖರೀದಿ ಮಾಡಬೇಕು. ಎರಡನ್ನೂ ಸಂಬಾಳಿಸುವ ಕೆಲಸಕ್ಕೆ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಹಾಗಂತ ಸುಮ್ನೆ ಕೂಡಲು ಬರೋದಿಲ್ಲ. ಯಾವುದಾದರೂ ಒಂದು ಪರಿಹಾರ ಹುಡುಕಲೇ ಬೇಕು. ಜನ ಹೊರಗಡೆ ಕೂಡ ಬರಬೇಕು ಜೊತೆಗೆ ಪಸರಸ್ಪರ ಅಂತರ ಕೂಡ ಕಾಯ್ದುಕೊಳ್ಳಬೇಕು. ಈ ಎರಡನ್ನೂ ನಿಭಾಯಿಸುವ ಪ್ಲಾನ್ ಒಂದನ್ನ ರಾಯಚೂರು ಪಾಲಿಕೆ ಹಾಗೂ ಪೋಲಿಸರು ಮಾಡಿದ್ದಾರೆ.

ಹೌದು… ಒಂದೆರೆಡು ಅಡಿ ಅಂತರದಲ್ಲಿ ನೆಲದ ಮೇಲೆ ಬಾಕ್ಸ್ ಗಳನ್ನು ನಿರ್ಮಾಣ ಮಾಡಿ ಸರದಿಯಲ್ಲಿ ಆ ಬಾಕ್ಸ್ ಗಳ ಮೂಲಕ ಜನ ಮಾರುಕಟ್ಟೆಯಲ್ಲಿ ಬೇಕಾದ ಸಾಮಾಗ್ರಿಗಳನ್ನ ಖರೀದಿ ಮಾಡಬೇಕು. ಸರದಿ ಸಾಲು ತಪ್ಪಿದರೆ ಲಾಠಿ ಕೆಲಸ ಮಾಡುತ್ತದೆ. ಹೀಗೆ ಸರದಿಯಲ್ಲಿ ನಿಂತು ಜನ ಮಾರುಕಟ್ಟೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದು ಎಲ್ಲಾಡೆ ಮಾದರಿಯಾಗಿದೆ.

ಸುರಕ್ಷಿತ ಅಂತರ ಕಾಯ್ದುಕೊಂಡು ರಾಯಚೂರಿನಲ್ಲಿ ಜನ ಕಿರಾಣಿ ಹಾಗೂ ಮೆಡಿಕಲ್ ಶಾಪ್ ಗಳಲ್ಲಿ ವಸ್ತುಗಳನ್ನ ಕೊಳ್ಳುತ್ತಿದ್ದು, ಅಂತರದ ಮಾರ್ಕ್ ಮಾಡಿರುವ ಬಾಕ್ಸ್ ಗಳಲ್ಲೇ ನಿಂತು ಸಾಮಾಗ್ರಿಗಳನ್ನ ಖರೀದಿಸುವ ಮೂಲಕ ಜಾಗೃತಿ ಮೆರೆಯಲು ಮುಂದಾಗಿದ್ದಾರೆ. ಜನರಿಗೆ ಕಿರಾಣಿ, ತರಕಾರಿ ಹಾಗೂ ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹಲವೆಡೆ ಜನರು ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ.

ವಾರ್ಡ್‍ಗಳಲ್ಲೆ ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರದ 35 ವಾರ್ಡ್ ಜನರಿಗೆ 17 ಸ್ಥಳಗಳಲ್ಲಿ ತರಕಾರಿ ಕೊಳ್ಳಲು ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲು ಕಿರಾಣಿ ಅಂಗಡಿ , ಔಷಧಿ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ.

ಮನೆಗೆ ದಿನ ಬಳಕೆಯ ವಸ್ತುಗಳು ಬೇಕೇ. ಹೇಳಿ ಕೇಳಿ ಹಬ್ಬ ಬೇರೆ. ಇದರಿಂದ ಜನ ಮುಗಿಬಿದ್ದು ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಜನರ ಹಿತದೃಷ್ಟಿಯಿಂದ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ಗಳು ಈ ರೀತಿ ಯೊಜನೆ ರೂಪಿಸಿದ್ದು ಶ್ಲಾಘಿಸಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights