ಪಶ್ಚಿಮ ಬಂಗಾಳದಲ್ಲಿ ಮುಸ್ಲೀಮರ ವಿರುದ್ಧ ದ್ವೇಷ ಹರಡುತ್ತಿರುವ ದಾಳಿಗೊಳಗಾದ ಪೊಲೀಸ್ ಚಿತ್ರ ಉತ್ತರ ಪ್ರದೇಶದ್ದು!
ಕಾನ್ಪುರದಲ್ಲಿ ಯುವಕನೊಬ್ಬ ಪೊಲೀಸ್ ಸಿಬ್ಬಂದಿಯನ್ನು ಒದೆಯುವ ಹಳೆಯ ಚಿತ್ರವು ಪಶ್ಚಿಮ ಬಂಗಾಳದಲ್ಲಿ ಮುಸ್ಲೀಮರು ರಾಜ್ಯ ಪೊಲೀಸರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ದೇಶಾದ್ಯಂತ ಹರಿದಾಡಿದೆ. ಇದು 2017 ರ ಜೂನ್‌ನಲ್ಲಿ ಕಾನ್ಪುರದಲ್ಲಿ ಆಸ್ಪತ್ರೆ ಸಿಬ್ಬಂದಿಯಿಂದ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾದ ಸಂದರ್ಭದಲ್ಲಿ ಆಕ್ರೋಷಗೊಂಡ ಜನರ ಗುಂಪು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದ ಸಂದರ್ಭದ ಚಿತ್ರವೆಂದು ಬೂಮ್ ಕಂಡುಹಿಡಿದಿದೆ.
ಈ ಚಿತ್ರವನ್ನು ಹರಿಬಿಟ್ಟಿದ್ದ ವ್ಯಕ್ತಿಯು, ಬೀದಿಯಲ್ಲಿ ಮಲಗಿರುವ ಪೊಲೀಸರ ಮೇಲೆ ಯುವಕನೊಬ್ಬ ಹಲ್ಲೆ ಮಾಡಲು ಕಾಲು ಎತ್ತಿರುವಂತೆ ತೋರಿಸಿರುವ ಚಿತ್ರವನ್ನು ತನ್ನ ಖಾತೆಯಿಂದ ಪೋಸ್ಟ್ ಮಾಡಿದ್ದು, ಈ ಚಿತ್ರವು ದೇಶಾದ್ಯಂತ ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿರುವವರ ಮೇಲೆ ರಾಜ್ಯದಲ್ಲಿ ದಾಳಿಗಳು ನಡೆಯುತ್ತಿರುವುದನ್ನು ತೋರಿಸುತ್ತದೆ. ಇದು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರದ ವೈಫಲ್ಯವನ್ನು ಸೂಚಿಸುತ್ತದೆ. ದೇಶದ ಹಿತದೃಷ್ಟಿಯಿಂದ ಪಶ್ಚಿಮ ಬಂಗಾಳದಲ್ಲಿ ಸೇನೆಯನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ.
https://www.facebook.com/permalink.php?story_fbid=515233542697498&id=100026325705904
ಬಂಗಾಳಿ ಭಾಷೆಯ ಶೀರ್ಷಿಕೆ ಹೊಂದಿರುವ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಆಡಳಿತ ವಿಫಲವಾಗಿದೆ. ಪಶ್ಚಿಮ ಮೇದಿನಿಪುರ ಮತ್ತು ಮಾಲ್ಡಾ ಸೇರಿದಂತೆ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಪೊಲೀಸರು ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಿದಾಗ, ಪೊಲೀಸರು ಮತ್ತು ಸ್ಥಳೀಯರ ನಡುವೆ ಹಿಂಸಾತ್ಮಕ ಘರ್ಷಣೆಗಳು ವರದಿಯಾಗಿವೆ. ಸಂಪರ್ಕತಡೆ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಕಳೆದ ವಾರ ಅಸನ್ಸೋಲ್‌ನ ಜಮುರಿಯಾ ಪ್ರದೇಶದಿಂದಲೂ ಘರ್ಷಣೆಗಳು ವರದಿಯಾಗಿವೆ ಎಂದು ಮಸ್ಲೀಮರ ಮೇಲೆ ಆರೋಪಿಸಿ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಲಾಗಿತ್ತು.
ಫ್ಯಾಕ್ಟ್ ಚೆಕ್
ಬೂಮ್ ಈ ಫೋಟೋವನ್ನು ಹಿಡಿದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದು, ಇದು ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿಲ್ಲ. ಅಲ್ಲದೆ, ಇದು ಲಾಕ್‌ಡೌನ್ ಸಂದರ್ಭದಲ್ಲಿ ಸಂಭವಿಸಿರುವ ಘಟನೆಯ ಫೋಟೋ ಕೂಡ ಅಲ್ಲ ಎಂಬುದನ್ನು ಕಂಡುಹಿಡಿದಿದೆ.
ರಿವರ್ಸ್ ಇಮೇಜ್ ಹುಡುಕಾಟದ ನಂತರ, ಮುಸ್ಲೀಮರ ಮೇಲೆ ಗೂಬೆ ಕೂರಿಸಲು ಬಳಸಿಕೊಂಡಿದ್ದ ಈ ಚಿತ್ರ 2017ರಲ್ಲಿ ಸೆರೆಹಿಡಿದಿರುವ ಚಿತ್ರವೆಂದು ತಿಳಿದುಬಂದಿದೆ.
2017ರ ಜೂನ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಕಾನ್ಪುರದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಚುಚ್ಚುಮದ್ದು ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆಸ್ಪತ್ರೆಯಲ್ಲಿಯೂ ಬಾಲಕಿಯನ್ನು ರಕ್ಷಿಸಲಾಗ ಸ್ಥಿತಿಯಲ್ಲಿರುವ ರಾಜ್ಯದ ಪರಿಸ್ಥಿತಿಯ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ತೀವ್ರಗೊಂಡು ಜನರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಆ ಸಂದರ್ಭದಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಈ ಘರ್ಷಣೆಯ ಬಗ್ಗೆ ‘ದಿ ಸನ್’ ವರದಿ ಮಾಡಿದೆ.
https://youtu.be/17PMXZMdUuM
ಅಲ್ಲದೆ, ಈ ಘಟನೆ ಬಗ್ಗೆ ನ್ಯೂನ್ಸ್ ನೇಷನ್ ವಾಹಿನಿಯು ವರದಿ ಮಾಡಿದ್ದು, ಆ ವರದಿಯ ವಿಡಿಯೋದಲ್ಲಿ ಯುವಕನೊಬ್ಬ ಪೊಲೀಸನ್ನು ಒದೆಯುವ ಚಿತ್ರವನ್ನು ನಾವು ಕಾಣಬಹುದು.