ಬರ.. ಬರ.. ಬರ… ಭರಾಟೆಗೆ ಭರ್ಜರಿ ರೆಸ್ಪಾನ್ಸ್ : ಮೂವರು ಡೈಲಾಗ್ ಕಿಂಗ್ ವಿಲನ್ ಗಳ ಅಬ್ಬರ

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷೆಯ ಅದ್ಧೂರಿ ತಾರಾಗಣದ ಚಿತ್ರ ಭರಾಟೆ ಜರ್ಜರಿಯಾಗಿ ನಿನ್ನೆ ತೆರೆಗಪ್ಪಳಿಸಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಆರ್ಭಟ ಪ್ರದರ್ಶಿಸಿದೆ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಭರಾಟೆ ಚಿತ್ರ ಪ್ರೇಕ್ಷಕರಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ಭರ್ಜರಿ, ಬಹದ್ದೂರ್ ಖ್ಯಾತಿಯ ಚೇತನ್‍ಕುಮಾರ್ ನಿರ್ದೇಶನದ 3ನೆ ಸಿನಿಮಾ ಇದಾಗಿದ್ದು, ಹಲವಾರು ವಿಶೇಷತೆಗಳ ಮೂಲಕ ನೋಡುಗರನ್ನ ತನ್ನತ್ತ ಸೆಳೆದಿದೆ. ಕಿಸ್ ಖ್ಯಾತಿಯ ನಟಿ ಶ್ರೀಲೀಲಾ ಈ ಚಿತ್ರದ ನಾಯಕಿ. ವಿಶೇಷವೆಂದರೆ ತ್ರಿವಳಿ ಸಹೋದರರಾದ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಈ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದು, ಒಟ್ಟಿಗೆ ಅಭಿಮಾನಿಗಳೊಂದಿಗೆ ಕುಳಿತು ನಿನ್ನೆ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾಯಕ ನಟ ಶ್ರೀಮುರುಳಿ ಮಾತನಾಡಿ, ಉಗ್ರಂ ಚಿತ್ರದ ನಂತರ ನಾನು ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ ಇದು. ಈಗ ಕನ್ನಡದಲ್ಲಿ ಒಂದಷ್ಟು ರೆಕಾರ್ಡ್ ಬ್ರೇಕಿಂಗ್ ಸಿನಿಮಾಗಳು ಬಂದಿವೆ. ಅದೇ ರೀತಿ ಭರಾಟೆ ಕೂಡ ಮತ್ತೊಂದು ಬ್ರೇಕಿಂಗ್ ಸಿನಿಮಾ ಆಗಿದೆ. ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ. ಅದೇ ಸಂತೋಷ ಎಂದರು.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಭರಾಟೆ ಸಿನಿಮಾದ ಹೈಲೆಟ್ ವಿಲನ್ ಬ್ರದರ್ಸ್ ಸಖತ್ ಡೈಲಾಗ್ಸ್ ಹಾಗೂ ಶ್ರೀ ಮುರುಳಿ ನಟನೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ತೆರೆ ಕಂಡ ಮೊದಲನೇ ದಿನಕ್ಕೆ ಭರ್ಜರಿ ರೆಸ್ಪಾನ್ಸ್ ಪಡೆದ ಭರಾಟೆ ಸಾಕಷ್ಟು ಸದ್ದು ಮಾಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights