ಬಹುನಿರೀಕ್ಷೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಟೀಸರ್ ರಿಲೀಸ್…

ನಿರ್ದೇಶಕ ಸುಕ್ಕಾ ಸೂರಿ ಮತ್ತು ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಕಾಂಬಿನೇಷನ್ ನ ಬಹುನಿರೀಕ್ಷೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು.

ಅಭಿಮಾನಿಗಳ ನಿರೀಕ್ಷೆಗೂ ಮೀರಿದೆ ಧನಂಜಯ್ ಮಂಕಿ ಟೈಗರ್ ಅವತಾರ. ‘ಟಗರು’ ಡಾಲಿಗಿಂತ ಭಯಾನಕವಾಗಿದೆ ಈ ‘ಪಾಪ್ ಕಾರ್ನ್ ಮಂಕಿ ಟೈಗರ್’. ಟೀಸರ್ ಪ್ರಾರಂಭದಲ್ಲೆ ಪ್ರೇಕ್ಷಕರಿಗೆ ರಕ್ತದ ದರ್ಶನವಾಗುತ್ತೆ. ನಿರ್ದೇಶಕ ಸೂರಿಯ ‘ರಾ’ ಫ್ಲೇವರ್ ಈ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ನೋಡಲು ಸಖತ್ ಭಯಂಕರವಾಗಿದ್ದು ನಟ ಧನಂಜಯ್ ನಟರಾಕ್ಷಸ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಹಳೆಯ ಕಟ್ಟಡ, ನಲ್ಲಿಯಲ್ಲಿ ತೊಟ್ಟಿಕ್ಕುವ ನೀರು, ನೆಲಕ್ಕೆ ಬಿದ್ದ ರಕ್ತದ ಹೊಳೆ, ನದಿಯ ನೀರಲ್ಲಿ ಬರೆತ ರಕ್ತ, ಒಂದು ಕೊಲೆ, ಮುಗ್ಧ ಮಗುವಿನ ಮುಖ, ಈ ಮಧ್ಯೆ ಬಂದು ಹೋಗುವ ಅನೇಕ ಮುಖಗಳು. ಹೀಗೆ ಟೀಸರ್​ನಲ್ಲಿ ಸಾಕಷ್ಟು ವಿಚಾರಗಳನ್ನು ಎಷ್ಟು ಬೇಕೋ ಅಷ್ಟೇ ಹೇಳಿದ್ದಾರೆ ಸೂರಿ. ಈ ಮೂಲಕ ಕುತೂಹಲ ಹೆಚ್ಚಿಸುವ ಕೆಲಸ ಮಾಡಿದ್ದಾರೆ.

ಇನ್ನು, ಡಾಲಿ ಧನಂಜಯ್ ಟೀಸರ್​ನಲ್ಲಿ​ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದರೆ, ಸಿನಿಮಾದಲ್ಲೂ ಧನಂಜಯ್​ಗೆ ಹಲವು ಶೇಡ್​ಗಳಿವೆ ಎನ್ನುವ ವಿಚಾರ ಪಕ್ಕಾ ಆಗಿದೆ. ಚರಣ್​ ರಾಜ್​ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.

Spread the love

Leave a Reply

Your email address will not be published. Required fields are marked *