ಬಿಗ್ ಶಾಕ್ ಕೊಟ್ಟ ಚುನಾವಣಾ ಆಯೋಗ : ವಿವಿಧ ರಾಜಕೀಯ ಮುಖಂಡರ ಮೇಲೆ ಎಫ್ ಐ ಆರ್

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಕಳೆದ ನಿನ್ನೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇಂದು ಏನಿದ್ದರೂ ಮನೆ ಮನೆ ಪ್ರಚಾರ ಮಾತ್ರ. ಉಪಚುನಾವಣೆಗೆ ಚುನಾವಣಾ ಆಯೋಗ ಹದ್ದಿನ ಕಣ್ಣು ನೆಟ್ಟಿದ್ದರೂ, ಅಕ್ರಮಗಳಿಗೇನು ಕಡಿಮೆ ಆಗಿಲ್ಲ. ಕಟ್ಟೆಚ್ಚರದ ನಡುವೆಯೂ ಅಕ್ರಮಗಳು ಮುಂದುವರೆದಿದ್ದು, ವಿವಿಧ ರಾಜಕೀಯ ಮುಖಂಡರ ಮೇಲೆ ಎಫ್ ಐ ಆರ್ ಕೂಡ ದಾಖಲಾಗಿದೆ.

ನಾಳೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತದಾನ ನಡೆಯಲಿದೆ. ಇಂತಹ ಉಪ ಚುನಾವಣೆಗೆ ಚುನಾವಣಾ ಆಯೋಗ ಅಕ್ರಮಗಳನ್ನು ತಡೆಗಟ್ಟುವುದಕ್ಕೆ ಬಿಗಿ ಕ್ರಮ ಕೈಗೊಂಡಿದೆ. ಆದ್ರೂ ಆಕ್ರಮಗಳು ಮಾತ್ರ ನಿಂತಿಲ್ಲ. ಹೀಗಾಗಿಯೇ ಉಪ ಚುನಾವಣೆ ಸಂದರ್ಭದಲ್ಲಿ ಇದುವರೆಗೆ 10.70 ಕೋಟಿ ಮೊತ್ತದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರೇ, ಈ ಸಂಬಂಧ 197 ಜನರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಇನ್ನೂ ನಾಳೆ ನಡೆಯಲಿರುವ ಉಪ ಚುನಾವಣೆಯ ಮತದಾನದ ಕ್ಷೇತ್ರಗಳಲ್ಲಿ 884 ಅತಿಸೂಕ್ಷ ಮತಗಟ್ಟೆ ಎಂದು ಘೋಷಿಸಲಾಗಿದೆ. ಇದಲ್ಲದೇ 206 ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ, 259 ಮತಗಟ್ಟೆಗಳಲ್ಲಿ ಸಂಪೂರ್ಣ ವೀಡಿಯೋ ಚಿತ್ರೀಕರಣ, 805 ಮೈಕ್ರೋ ಅಬಸರ್ವರ್ ನಿಯೋಜಿಸಲಾಗಿದೆ. 414 ಕೇಂದ್ರಗಳಿಗೆ ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದೂ, ಎಲ್ಲೆಲ್ಲೂ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಉಪ ಚುನಾವಣೆಯಲ್ಲಿನ ಒಟ್ಟು ಮತದಾರರು 37,82,681 ಆಗಿದ್ದು, ಇದರಲ್ಲಿ ಪುರುಷ ಮತದಾರರು 19,25,529 ಆದ್ರೇ, ಮಹಿಳಾ ಮತದಾರರು 18,52,027. ಹೊಸದಾಗಿ ಇದೇ ಮೊದಲ ಬಾರಿಗೆ ನಮೂದಿಸಿಕೊಂಡು ಮತ ಚಲಾಯಿಸುತ್ತಿರುವ ನವ ಮತದಾರರು 78,714 ಆಗಿದ್ದರು, ಇತರೆ ವರ್ಗ ಮತದಾರರು 414 ಆಗಿರುತ್ತಾರೆ.

ಇಂತಹ ಉಪ ಚುನಾವಣೆಯಲ್ಲಿ ವಿವಿಧ ಕಾರಣದಿಂದಾಗಿ ಪ್ರಮುಖ ರಾಜಕೀಯ ನಾಯಕರ ವಿರುದ್ಧ ಕೂಡ ಎಫ್‌ಐಆರ್ ದಾಖಲಾಗಿದೆ. ಅವರೆಂದ್ರೇ, ಹಣ ಹಂಚಿಕೆ ಆರೋಪದಡಿ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ನೋಟು ಕಾಗ್ರೆಸ್ ಗೆ ಓಟು ಎಂದ ಮಾಜಿ ಸಿಎಂ ಸಿದ್ದರಾಮಯ್ಯ, ನಿಂದನಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸ್ವೀಕರ್ ರಮೇಶ್ ಕುಮಾರ್, ಜಾತಿ ಪ್ರಚೋದನೆ ಹೇಳಿಕೆಗಾಗಿ ಸಚಿವ ಶ್ರೀರಾಮುಲು, ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಶಿವರಾಜ್ ತಂಡರಗಿ, ಮಕ್ಕಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಮುಖಂಡರ ವಿರುದ್ಧ, ಲಿಂಗಾಯತ ವೀರಶೈವ ಮತ ಬಿಜೆಪಿಗೆ ತಪ್ಪಬಾರದ ಎಂದ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights