ಬಿಹಾರ: ಗಲ್ಫ್ ಇಂದ ಹಿಂದಿರುಗಿದವರ ಸಂಖ್ಯೆ 4000; ಕೋವಿಡ್-19 ಪರೀಕ್ಷೆಗೆ ಒಳಪಟ್ಟವರು 500
ಕಳೆದ ಮೂರು ತಿಂಗಳುಗಳಲ್ಲಿ ಗಲ್ಫ್ ದೇಶಗಳಿಂದ ಬಿಹಾರದ ಗೋಪಾಲಗಂಜ್ ಮತ್ತು ಸಿವಾನ್ ಗೆ ಹಿಂದಿರುಗಿದ 4169 ಜನರಲ್ಲಿ ಬಿಹಾರ ಸರ್ಕಾರ ಕೇವಲ 500 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದೆ. “ಪರೀಕ್ಷೆ ಸಲಕರಣೆಗಳು ನಮಗೆ ತಲುಪಲು ತಡವಾಗಿದ್ದು ನಾವು ಪರೀಕ್ಷೆ ನಡೆಸಲು ತಡ ಮಾಡಿದ್ದಕ್ಕೆ ಕಾರಣ. ನಮಗೆ ಪರೀಕ್ಷೆ ಕಿಟ್ ಗಳು ಮಾರ್ಚ್ 28ಕ್ಕೆ ತಲುಪಿದವು. ಮಾರ್ಚ್ 29 ರಿಂದ ನಾವು 350 ಪರೀಕ್ಷೆ ನಡೆಸಿದ್ದೇವೆ. ಕಳೆದ ಎರಡು ಮೂರು ವಾರಗಳಿಂದ ಗಲ್ಫ್ ನಿಂದ ಹಿಂದಿರುಗಿದವರು ತಮ್ಮ ಕುಟುಂಬಗಳ ಜೊತೆಗೆ ನೆಲೆಸಿದ್ದಾರೆ. ಅವರು ಪ್ರತ್ಯೇಕತೆಯ ನಿಯಮಗಳನ್ನು ಪಾಲಿಸಿದ್ದಾರೆಯೋ ಇಲ್ಲವೋ ತಿಳಿದಿಲ್ಲ” ಎಂದು ಗೋಪಾಲಗಂಜ್ ಆಡಳಿತ ತಿಳಿಸಿರುವುದಾಗ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕತಾರ್ ನಿಂದ ಹಿಂದಿರುಗಿಸಿದ ವ್ಯಕ್ತಿ ಬಿಹಾರದಲ್ಲಿ ಮೊದಲ ಕೊರೊನ ಸೋಂಕಿತ ವ್ಯಕ್ತಿ ಎಂದು ತಿಳಿದುಬಂದಿದೆ. ಅವರಿಂದ ಇನ್ನು ಹತ್ತು ಜನರಿಗೆ ಸೋಂಕು ಹರಡಿತ್ತು. ಮಂಗಳವಾರ ಗೋಪಾಲಗಂಜ್ ನಿವಾಸಿ ಕೊರೊನ ಸೋಂಕು ಪತ್ತೆಗೆ ಪಾಸಿಟಿವ್ ಆಗಿದ್ದರು. ಅವರ ಕುಟುಂಬದ 16 ಜನರನ್ನು ಈಗ ಪರೀಕ್ಷೆಗೆ ಒಳಪಡಿಸಲಾಗಿದೆ. ಗಲ್ಫ್ ರಾಷ್ಟ್ರಗಳಿಂದ ಗೋಪಾಲಗಂಜ್ ಗೆ ಸುಮಾರು 3181 ಜನ ಹಿಂದಿರುಗಿದ್ದಾರೆ.
ಮುಂದಿನ ಹತ್ತು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಈಗ ಗಲ್ಫ್ ರಾಷ್ಟ್ರಗಳಿಂದ ಹಿಂದಿರುಗಿರುವ ಎಲ್ಲರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವ ಕೆಲಸಕ್ಕೆ ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.
ಬಿಹಾರದಲ್ಲಿ ಇಲ್ಲಿಯವರೆಗೂ 16 ಕೊರೊನ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.