ಮಂತ್ರಿಯಾಗಿ ಚುನಾವಣೆ ಎದುರಿಸುವ ಅನರ್ಹರ ಆಸೆಗೆ ಕೋರ್ಟ್ ತಣ್ಣೀರು – H.P.ಮಂಜುನಾಥ್
ಅನರ್ಹರು ಮಂತ್ರಿಯಾಗಿ ಚುನಾವಣೆ ಎದುರಿಸುವ ಆಸೆ ಹೊಂದಿದ್ರು. ಅವರ ಆಲೋಚನೆಗೆ ಸುಪ್ರೀಂಕೋರ್ಟ್ ತಣ್ಣಿರು ಎರಚಿದೆ. ಈಗ ಅವರೇಲ್ಲ ಜನತಾ ನ್ಯಾಯಾಲಯದಲ್ಲಿ ತೀರ್ಪು ಪಡೆಯಬೇಕಿದೆ. ಹುಣಸೂರಿನಲ್ಲಿ ನಾಮಪತ್ರ ಸಲ್ಲಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ H.P.ಮಂಜುನಾಥ್ ಹೇಳಿದ್ದಾರೆ.
ಇದೊಂದು ಅನೈತಿಕ ಚುನಾವಣೆ. ಈ ಉಪಚುನಾವಣೆ ಬೇಕಾಗಿರಲಿಲ್ಲ. ಆದ್ರೆ ಅನರ್ಹರು ದುರುದ್ದೇಶದಿಂದ ರಾಜೀನಾಮೆ ನೀಡಿದ್ರು. ಹುಣಸೂರು ಶಾಸಕರಂತು ಕ್ಷೇತ್ರವನ್ನ ಒಂದೂವರೆ ವರ್ಷದಿಂದ ಅನಾಥ ಮಾಡಿದ್ರು. ರಾಜೀನಾಮೆ ನೀಡಿದ್ದಕ್ಕೆ ತಕ್ಕನಾಗಿ ಕ್ಷೇತ್ರಕ್ಕೆ ಅನುದಾವನ್ನಾದ್ರು ತಂದ್ರಾ? ಯಾವುದೇ ಉದ್ದೇಶವಿಲ್ಲದೆ ಸ್ವಹಿತಕ್ಕಾಗಿ ರಾಜೀನಾಮೆ ನೀಡಿದವರ ಬಗ್ಗೆ ಜನ ತೀರ್ಮಾನ ಮಾಡ್ತಾರೆ.
ಹುಣಸೂರು ತಾಲ್ಲೂಕಿನ ಪ್ರತಿ ಮನೆಯಲ್ಲು ಅನರ್ಹ ಶಾಸಕರ ಬಗ್ಗೆ ಅಸಮಾಧಾನ ಇದೆ. ಸುಪ್ರೀಂಕೋರ್ಟ್ ಸಹ ನೀವು ಮಾಡಿದ್ದು ಸರಿನಾ ಅಂತ ಜನರನ್ನೆ ಕೇಳಿ ಎಂದು ತೀರ್ಪು ನೀಡಿದೆ. ಈ ಚುನಾವಣಾ ತಾಲ್ಲೂಕಿನ ಚುನಾವಣೆಯಾಗಲಿದೆ.
15 ತಾರೀಖಿನಿಂದ ಪ್ರಚಾರ ಮಾಡ್ತಿವಿ. ಪ್ರಚಾರಕ್ಕೆ ಎಲ್ಲ ನಾಯಕರು ಬರ್ತಾರೆ. ಸಿದ್ದರಾಮಯ್ಯ, ಡಿಕೆ.ಶಿವಕುಮಾರ್.ಪರಮೇಶ್ವರ್ ಎಲ್ಲರು ಬರ್ತಾರೆ. ಈ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.