ಮನೆ ಕೆಲಸಗಾರನ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸಿ ಶುಭಾಷಯ ಕೋರಿದ ಸುದೀಪ್

ಬಹುಭಾಷಾ ನಟನೆಂದೇ ಖ್ಯಾತಿ ಪಡೆಯುತ್ತಿರುವ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಎಂದು ಹೆಗ್ಗಳಿಕೆ ಪಡೆದಿರುವ ಕಿಚ್ಚ ಸುದೀಪ್ ತಮ್ಮ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಸುದೀಪ್‌ ತಮ್ಮ ಮಗಳ ಹುಟ್ಟು ಹಬ್ಬಕ್ಕಾಗಿ ಒಂದು ಹಾಡನ್ನು ಕಂಪೋಸ್‌ ಮಾಡಿ, ಹಾಡಿದ್ದರು. ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮಗಳ 16ನೇ ವರ್ಷದ ಹುಟ್ಟುಹಬ್ಬಕ್ಕಾಗಿ 16 ವಸಂತಗಳ ನೆನಪುಗಳನ್ನೆಲ್ಲಾ ಸೇರಿಸಿ ಹಾಡು ಕಟ್ಟಿದ್ದರು.

ಮಗಳ ಹುಟ್ಟುಹಬ್ಬಕ್ಕೆ ಹಾಡು ಬರೆದಿದ್ದ ಸುದೀಪ್‌, ಈಗ ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಕೆಲಸಗಾರನ ಬರ್ತಡೆಗೆ ಪಿಯಾನೋ ನುಡಿಸಿ ಶುಭಕೋರಿದ್ದಾರೆ. ಸುದೀಪ್‌ ಪಿಯಾನೋ ನುಡಿಸುವ ವಿಡಿಯೋ ವೈರಲ್‌ ಆಗಿದ್ದು, ಅಭಿಮಾನಿಗಳ ಫಿದಾ ಆಗಿದ್ದಾರೆ.

ವಿಡಿಯೋ ನೋಡಿ:

https://www.instagram.com/p/CA4RF-0HZ2Q/?utm_source=ig_web_copy_link

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಮನೆ ಕೆಲಸಗಾರನ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸಿ ಶುಭಾಷಯ ಕೋರಿದ ಸುದೀಪ್”

  • August 31, 2020 at 12:31 pm
    Permalink

    I go to see everyday a few sites and websites to read articles or reviews, but this weblog provides quality based writing.

    Reply

Leave a Reply

Your email address will not be published.

Verified by MonsterInsights