ಮನೆ ಬಿದ್ದರೂ ಪರಿಹಾರ ಸಿಗದಿದ್ದಕ್ಕೆ ಮನನೊಂದು ಅಂಗವಿಕಲ ಯುವತಿ ಆತ್ಮಹತ್ಯೆ..!

ಪರಿಹಾರ ಕೊಡಿ ಸ್ವಾಮಿ ಪರಿಹಾರ ಕೊಡಿ… ಹೀಗೆ ಅಂಗಲಾಚಿ ಕೇಳಿ ಕೇಳಿ ಕೊನೆಗೆ ಬೇಸತ್ತ ಅಂಗವಿಕಲೆ ಯುವತಿಯೊಬ್ಬಳು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆ ಬಿದ್ದರೂ ಪರಿಹಾರ ಸಿಗದಿದ್ದಕ್ಕೆ ಮನನೊಂದು ಅಂಗವಿಕಲ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ದುಬ್ಬನಮರಡಿ ಗ್ರಾಮದಲ್ಲಿ  ನಡೆದಿದೆ.

ಮಂಜುಳಾ ಕಲ್ಲೂರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ತೀವ್ರ ಸಂಕಷ್ಟದಲ್ಲಿರುವ ಮಂಜುಳಾ ಕಲ್ಲೂರು ಕುಟುಂಬದಲ್ಲಿ ತಂದೆ ಬಸವರಾಜ್ ಕಲ್ಲೂರು, ತಂಗಿ ಉಡಚವ್ವ, ತಮ್ಮ ಪರಶುರಾಮ್ ಎಲ್ಲರೂ ಕೂಡ ಅಂಗವಿಕಲರು. ದಿನ ನಿತ್ಯದ ಊಟಕ್ಕೂ ಪರದಾಡಬೇಕಾದ ಸ್ಥಿತಿ ಇದೆ.

ಕುಸಿದ ಮನೆಯಲ್ಲೇ ಸಂಕಷ್ಟದಲ್ಲಿ ಬದುಕುತ್ತಿರುವ ಬಡ ಕುಟಂಬ. ಮಳೆಯಿಂದ ಮನೆ ಬಿದ್ದರೂ ಸೂಕ್ತ ಪರಿಹಾರ ಇವರಿಗೆ ಸಿಕ್ಕಿರಲಿಲ್ಲ. ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಪರಿಹಾರ ಸಿಗದೆ ಮನನೊಂದಿದ್ದ ಮಂಜುಳಾಗೆ ಜೀವನವೇ ಬೇಡವಾಗಿ ಹೋಗಿದೆ.

ಭಾಗಶಃ ಮನೆ ಕುಸಿದು ವಾಸಯೋಗ್ಯವಲ್ಲದ ಸ್ಥಿತಿಯಲ್ಲಿತ್ತು. ಅಧಿಕಾರಿಗಳು ಕೇವಲ ೫೦ ಸಾವಿರ ರೂಪಾಯಿ ಪರಿಹಾರ ನೀಡಿ ಸುಮ್ಮನಾಗಿದ್ದರು.
ವಾಸಕ್ಕೆ ನೆಲೆಯಿಲ್ಲದೆ ತೀವ್ರ ನೊಂದಿದ್ದ ಮಂಜುಳಾ   ನಿನ್ನೆ ಮಧ್ಯಾಹ್ನ ಧಾರವಾಡದ ಕೆ.ಸಿ. ಪಾರ್ಕನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights