ಮನೆ ಮೇಲ್ಚಾವಣಿ ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು….!

ಮನೆ ಮೆಲ್ಚಾವಣಿ ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿಯ ಮಖಾನ್ ಗಲ್ಲಿಯಲ್ಲಿ ನಡೆದಿದೆ.

ಪಕ್ಕಿರಪ್ಪ 40 ವರ್ಷ, ಮೃತ ದುರ್ದೈವಿ. ಮೂಲತಃ ಹಾವೇರಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿ. ಹಳೆಯ ಮನೆಯನ್ನು ಬೀಳಿಸುವ ವೇಳೆ ಈ ದುರ್ಘಟನೆ ನಡೆದಿದೆ. ಇಂದು ಅಗ್ನಿಶಾಮಕ ಠಾಣಾಧಿಕಾರಿ ಅಮೃತ ಟಿ ನೇತೃತ್ವದಲ್ಲಿ ಹಳೆ ಮನೆ ಬೀಳಿಸಲು ಬಂದಿದ್ದರು. ಈ ವೇಳೆ ಕಮಾಲಸಾಬ್ ದೇವಿಹೊಸೂರ ಎಂಬುವರಿಗೆ ಸೇರಿದ ಮನೆಯ ಬೀಳಿಸುವಾಗ ಪಕ್ಕದ ಮನೆಯ ಮೇಲ್ಚಾವಣಿ ಹಾಗೂ ಆಲದ ಮರ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಪಕಿರಪ್ಪ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಾವೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.