ಮಹಾರಾಷ್ಟ್ರದಲ್ಲಿ ಮತ್ತೆ ಮಳೆ : ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ…

ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಿಂದಾಗಿ ಕೋಯ್ನಾ ಜಲಾಶಯದಿಂದ‌ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಹೌದು… ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈಗ ೩೪೮೦೦ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ ೩೫೦೦೦ ಕ್ಯೂಸೆಕ್ ಒಳಹರಿವು ಇದೆ. ಒಳಹರಿವು ಹೆಚ್ವಾದಂತೆ ನದಿಗೆ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಹದಿನೈದು ದಿನಗಳ ಹಿಂದೆಷ್ಟೆ ಪ್ರವಾಹ ತಗ್ಗಿತ್ತು.  ಮಹಾಪ್ರವಾಹದಿಂದಾಗಿ ರಾಯಚೂರು ಜಿಲ್ಲೆಯಲ್ಲಿ ೨೬ ಗ್ರಾಮಗಳ ಸ್ಥಳಾಂತರಿಸಲಾಗುತ್ತು. ಅಲ್ಲದೇ ೧೬೧೫೬ ಹೆಕ್ಟರ್ ಕೃಷಿ ಭೂಮಿಯಲ್ಲಿಯ ಬೆಳೆ ನಾಶವಾಗಿ, ಜಿಲ್ಲೆಯಲ್ಲಿ ೩೨೨ ಕೋಟಿ ರೂಪಾಯಿ ಆಸ್ತಿ ಪಾಸ್ತಿ ಹಾನಿಯಾಗಿದೆ.

ಈಗಷ್ಟೆ ಗ್ರಾಮಸ್ಥರು ಗ್ರಾಮಕ್ಕೆ ಮರಳಿದ್ದಾರೆ. ಈಗ ನದಿಯಲ್ಲಿ ಮತ್ತೆ ಪ್ರವಾಹವಾದರೆ ಮತ್ತಷ್ಟು ಸಂಕಷ್ಟ ಅನುಭವಿಸುವ ಭೀತಿ ಎದುರಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights