ಮೈಸೂರು ಅರಮನೆಯ ದೀಪಾಲಂಕಾರಕ್ಕೆ ಮತಷ್ಟು ಮೆರಗು…
ವಿಶ್ವವಿಖ್ಯಾತ ಮೈಸೂರು ದಸರಾ ಅಲಂಕಾರಕ್ಕೆ ಹೆಚ್ಚು ಮೆರಗು ನೀಡುವ ಉದ್ದೇಶದಿಂದ ಹೆಚ್ಚು ಬಲ್ಫ್ ಗಳನ್ನು ಬಳಕೆ ಮಾಡಲಾಗುತ್ತಿದೆ.
ಹೌದು. ಈ ಬಾರಿ ಮೈಸೂರು ದಸರಾ ಹಬ್ಬಕ್ಕೆ ಅರಮನೆಯ ದೀಪಾಲಂಕಾರಕ್ಕೆ ಮತಷ್ಟು ಮೆರಗು ನೀಡುವ ಉದ್ದೇಶದಿಂದ 18 ಸಾವಿರಕ್ಕೂ ಹೆಚ್ಚು ಬಲ್ಪ್ ಗಳ ಬದಲಾವಣೆ ಮಾಡಲಾಗಿದೆ.ದಸರೆಗೂ ಮುನ್ನವೇ ದೀಪಾಲಂಕಾರದ ಬಲ್ಪ್ ಗಳು ಬದಲಾಗುತ್ತಿವೆ. ಕೈಗೆಟುಕುವ ಹಂತದಲ್ಲಿ ಸಿಬಂದ್ದಿಯಿಂದ ಬಲ್ಪ್ ಗಳ ಬದಲಾವಣೆ ಮಾಡಲಾಗುತ್ತಿದೆ.
ಮುಖ್ಯದ್ವಾರ ಸೇರಿದಂತೆ ಅರಮನೆ ಪ್ರಮುಖ ಸ್ಥಳಗಳಲ್ಲಿ ಕ್ರೇನ್ ಬಳಸಿ ಬಲ್ಬ್ ಬದಲಾವಣೆ ಮಾಡಲಾಗುತ್ತಿದ್ದು, ಇದಕ್ಕೆ ಅರಮನೆಯಲ್ಲಿ ಮಾತ್ರ ಬಳಸಲಾಗುವ ಇನ್ಕ್ಯಾಂಡಲ್ ಬಲ್ಬ್ಗಳನ್ನು ಅಳವಡಿಸಲಾಗುತ್ತಿದೆ. ಉತ್ಪಾದನೆ ನಿಂತಿದರು ತಮಿಳುನಾಡು ಮೂಲದ ಕಂಪನಿಯಿಂದ ಬಲ್ಪ್ಗಳ ಸರಬರಾಜು ಮಾಡಲಾಗಿದೆ. ವಿಶೇಷ ಬೇಡಿಕೆ ಮೇರೆಗೆ ತಮಿಳುನಾಡು ಕಂಪನಿ ಅರಮನೆಗೆ ಬಲ್ಫ್ ಸರಬರಾಜು ಮಾಡುತ್ತಿದೆ.
ಬಲ್ಪ್ ಬದಲಾವಣೆ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು ಈ ಮೂಲಕ ದಸರಾ ಉದ್ಘಾಟನೆಗೆ ತಯಾರಿ ಮಾಡಿಕೊಳ್ಳಾಗುತ್ತಿದೆ. ಬಲ್ಪ್ ಬದಲಾವಣೆ ಬಗ್ಗೆ ಅರಮನೆ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಮಾಹಿತಿ ನೀಡಿದ್ದಾರೆ.