ಮೋದಿ ತೋರಿಸ್ತಿರೋ ತಪ್ಪು ದಾರಿ ಸಿ.ಸಿ ಪಾಟೀಲ್ ತುಳೀತಿದ್ದಾರೆ – ಹೆಚ್.ಕೆ ಪಾಟೀಲ್
ಪ್ರಧಾನಿ ಮೋದಿ ಅವರು ತೋರಿಸ್ತಿರೋ ತಪ್ಪು ದಾರಿಯನ್ನು ಸಿ ಸಿ ಪಾಟೀಲ್ ತುಳೀತಿದ್ದಾರೆ ಅಂತಾ ಮೋದಿ ಹಾಗೂ ಸಚಿವ ಸಿ ಸಿ ಪಾಟೀಲ್ ವಿರುದ್ಧ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹರಿಹಾಯ್ದಿದ್ದಾರೆ. ಗದಗನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಹೆಚ್.ಕೆ.ಪಾಟೀಲ, ಸಿಎಎ ಕಾನೂನು ಸಂವಿಧಾನಾತ್ಮಕವಾಗಿ ಹೇಗೆ ಸರಿಯಿಲ್ಲ ಹಾಗೂ ಹೇಗೆ ಸಂವಿಧಾನದ ವಿರೋಧವಾಗಿದೆ ಅಂತ ರಾಜಕಾರಣಿಗಳು ಹೇಳೋದಲ್ಲ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ಹೇಳಿದ್ದಾರಲ್ಲ ಇದನ್ನು ಬಿಜೆಪಿಯ ಎಲ್ಲ ನಾಯಕರು ಗಮನಿಸಬೇಕು.
ಮೋದಿ ಅಮಿತ್ ಶಾರು ಅದನ್ನು ಓದಿ ತಿಳ್ಕೋಬೇಕು. ಧಾರ್ಮಿಕ ನೆಲೆಯಲ್ಲಿ ಪ್ರತ್ಯೇಕಿಸುವಂತದ್ದು, ಎಲ್ಲಿಯಾದ್ರೂ ಆಗಿದ್ರೆ ಅದು ನಮ್ಮ ದೇಶದಲ್ಲಿ ಆಗೋಕೆ ಬರುವುದಿಲ್ಲ ಅಂತಾ ಹೇಳಿದ್ರು. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದ್ದು ನಮ್ಮ ಸಂವಿಧಾನದ ಆಶಯವೇ ಜಾತ್ಯಾತೀತತೆ. ಎಲ್ಲರೂ ಸಮಾನರು ಅಂತ ಸಂವಿಧಾನದ ಉದ್ದೇಶವಾಗಿದ್ರೂ, ಅದನ್ನು ತಿರುಚಿ ಅದಕ್ಕೆ ದ್ರೋಹ ಎಸಗಿ ಸಿಎಎ ಮಾಡಿದ್ದಾರೆ. ರಾಷ್ಟ್ರದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗೋದಕ್ಕೆ ಬಿಜೆಪಿಯವರು ಕಾರಣೀಕರ್ತರಾಗಿದ್ದಾರೆ ಅಂತಾ ಪಾಟೀಲ ಬಿಜೆಪಿಯವರ ವಿರುದ್ಧ ಗುಡುಗಿದ್ರು. ಇನ್ನು ಕಾಂಗ್ರೆಸ್ ನವರು ಅಂಗಿ ಗೂಟಕ್ಕೆ ಹಾಕ್ತಾರೆ ಅನ್ನೋ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್ಕೆ, ಯಾವುದನ್ನು ಗೂಟಕ್ಕೆ ಹಾಕ್ತಾರೋ ಗೊತ್ತಿಲ್ಲ. ದೇಶದಲ್ಲಿ ಬಿಜೆಪಿ ಆಡಳಿತ ೭೦ % ಇತ್ತು ಈಗ ೩೫ % ಬಂದಿದೆ, ಅಂದ್ರೆ ಅರ್ಧಕ್ಕರ್ಧ ಕಡಿಮೆಯಾಗಿರೋದು ಕಣ್ಣಿಗೆ ಕಾಣ್ತಿದೆ.
ಇದನ್ನು ಪ್ರೊಜೆಕ್ಷನ್ ಮಾಡಿ ಮುಂದುವರೆಸಿಕೊಂಡು ಹೋಗಬೇಕು. ಅವಾಗ ಯಾರು ಝೀರೋ ಆಗ್ತಾರೆ ಗೊತ್ತಾಗುತ್ತೆ ಅಂತಾ ಹೇಳಿದ್ರು. ಭಾರಿ ಬಡಾಯಿ ಕೊಚ್ಚಿಕೊಂಡ ಬಿಜೆಪಿಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ, ಜಾರ್ಖಂಡ್ ನಲ್ಲಿ ಏನಾಗಿದೆ ನೋಡಿದ್ದೀರಿ. ಮುಂದೆ ದೆಹಲಿಯಲ್ಲಿ ಚುನಾವಣೆ ನಡೆಯುತ್ತೆ ಆವಾಗ ಏನಾಗುತ್ತೆ ಅಂತ ನೋಡುತ್ತೀರಿ. ಇವೆಲ್ಲಾ ಕಣ್ಣಿಗೆ ಕಾಣ್ತಿಲ್ಲವೇನು. ಅಲ್ಲದೇ ಇವನ್ನೆಲ್ಲ ಮಾಧ್ಯಮದವರು ಅವರಿಗೆ ಕಣ್ಣಿಗೆ ಕಾಣಿಸುವ ಹಾಗೆ ತೋರಿಸ್ತಿಲ್ಲ ಅಂತ ಟಾಂಗ್ ಕೊಟ್ಟ ಎಚ್ಕೆ ಅವರಿಗೆ ಕಣ್ಣಿಗೆ ಕಾಣೋ ಹಾಗೆ ತೋರಿಸಿದ್ರೆ ಎಚ್ಚರಿಕೆ ಆಗುತ್ತೆ ಅಂತ ತಿಳಿಸಿದ್ರು. ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ವಿಚಾರವಾಗಿ ಮಾತನಾಡಿದ ಅವ್ರು, ಆ ಸ್ಥಾನಕ್ಕೆ ಯೋಗ್ಯರಾದ ಸಾಕಷ್ಟು ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ಅವರನ್ನೆಲ್ಲಾ ಗಮನಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ ಅಂತಿದ್ದಾರೆ ಮಾಜಿ ಸಚಿವ ಹೆಚ್ ಕೆ ಪಾಟೀಲ್.