ರಾಣೇಬೆನ್ನೂರಿನಲ್ಲಿ ಕೈ ಗೆ ಬಲ ತುಂಬಿದ ಕೆಪಿಜೆಪಿ : ಮಾಜಿ ಸ್ಪೀಕರ್ ಫುಲ್ ಖುಷ್
ಹಾವೇರಿ ರಾಣೆಬೆನ್ನೂರು ಚುನಾವಣೆ ಕಾವು ರಂಗೇರಿದ್ದು, ಪಕ್ಷಗಳು ತಮ್ಮ ಜನ ಬಲ ಹೆಚ್ಚಿಸಿಕೊಳ್ಳುವಲ್ಲಿ ಹರ ಸಾಹಸ ಪಡುತ್ತಿವೆ.
ಈ ವೇಳೆ ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಪಿಜೆಪಿ ಕಾರ್ಯಕರ್ತರು ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಂತಾಗಿದೆ. ರಾಣೇಬೆನ್ನೂರು ನಗರದ ಕಾರ್ಯಕ್ರಮದಲ್ಲಿ ಮಾಜಿ ಸ್ವೀಕರ್ ಕೆ.ಬಿ.ಕೋಳಿವಾಡ ಅವರು ೨೦ ಕ್ಕೂ ಅಧಿಕ ಕಾರ್ಯಕರ್ತರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ನಂತರ ಮಾತನಾಡಿದ ಕೆ.ಬಿ.ಕೋಳಿವಾಡ, ಐವತ್ತು ವರ್ಷಗಳ ಕಾಲ ನನ್ನ ಜೀವಂತವಾಗಿ ಇಟ್ಟಿದ್ದೀರಿ. ನಿಮ್ಮ ಆರ್ಶಿವಾದ ಕಾರಣ ಬೇರೆ ಏನೋ ಇಲ್ಲ. ಐದು ಬಾರಿ ಗೆಲ್ಲಿಸಿದ್ದೀರಿ, ಎಂ.ಎಲ್.ಎ.ಮಾಡಿದ್ರೀ, ಮಿನಿಸ್ಟರ್ ಮಾಡಿದ್ರೀ ಸ್ವೀಕರ್ ಮಾಡಿದ್ರೀ ಇನ್ನು ಏನು ಮಾಡಬೇಕು. ನಾನು ಜೀವಂತ ಇರುವರೆಗೂ ರಾಣೇಬೆನ್ನೂರು ಋಣದಲ್ಲಿ ಇದ್ದೇನೆ. ಪ್ರಜಾಪ್ರಭುತ್ವ ಅಳಿವು ಉಳಿವಿನ ಪ್ರಶ್ನೆ ಬಂದಿದೆ.
ದೇವರಾಜ ಅರಸು ಮುಖ್ಯಮಂತ್ರಿ ಹಿಡಿದು ಎಲ್ಲಾ ಮುಖ್ಯಮಂತ್ರಿ ನೋಡಿದ್ದೇನೆ. ಸಿದ್ದರಾಮಯ್ಯ ಮಾಡಿದ ಕೆಲಸವನ್ನ ಯಾವ ಮುಖ್ಯಮಂತ್ರಿ ಮಾಡಿಲ್ಲ. ೨೦೧೩ – ೧೮ ವರೆಗೆ ಉತ್ತಮ ಆಡಳಿತ ನೀಡಿದ್ದಾರೆ. ಹಸಿವು, ಹಸಿವು ಅಂದ ಜನಕ್ಕೆ ಅನ್ನ ನೀಡಿದ್ದಾರೆ. ನೀವು ನಾವು ಸಿದ್ದರಾಮಯ್ಯನವರ್ ಋಣದಲ್ಲಿ ಇದ್ದೇವೆ.
ನೀವು ಸಿದ್ದರಾಮಯ್ಯ ಋಣದಲ್ಲಿ ಇದ್ದೀರಿ. ೧೬೫ ಭರವಸೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ನಡುವೆ ಸ್ವಲ್ವ ವೈ ಮನಸ್ಸು ಬಂದಿತ್ತು. ಅವರೆ ಕೆಲಸದ ಬಗ್ಗೆ ಮಾತನಾಡಿಲ್ಲ. ದೇವರಾಜ ಅರಸು ಹಿಂದುಳಿದ ಜನರ ಧ್ವನಿಯಾದ್ರೆ. ಸಿದ್ದರಾಮಯ್ಯ ಅತ್ಯಂತ ಕಡುಬಡವರ ಧ್ವನಿ ಕೆಲಸ ಮಾಡಿದ್ದಾರೆ. ಮತ್ತೆ ಮುಖ್ಯಮಂತ್ರಿ ಆಗೋ ಸಮಯ ಬಂದರೆ, ನಾನೇ ಮುಂದೆ ನಿಂತು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಬೆಂಬಲಿಸುತ್ತೆನೆ ಎಂದರು.