ರಾತ್ರಿ ಸುರಿದ ಮಳೆಗೆ ಕೆರೆ ಕಟ್ಟೆಗಳು ತುಂಬಿ ಅಪಾರ ಪ್ರಮಾಣದ ನಷ್ಟ….

ರಾತ್ರಿ ಸುರಿದ ಬಾರೀ ಮಳೆಗೆ ಕೆರೆ ಕಟ್ಟೆಗಳು ತುಂಬಿ ಕೆಲವು ಕಡೆ ಕೆರೆ ಏರಿ ಹೊಡೆದು ಅಪಾರ ಪ್ರಮಾಣದ ನಷ್ಟವಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಬಳಿಯ ಸೂಜಿಗಲ್ಲು ಗುಡ್ಡದ ಕೆರೆ ಏರಿ ಹೊಡೆದು ರೈತರ ಕೃಷಿ ಜಮೀನಿಗೆ ಮಳೆ‌ ನೀರು ನುಗ್ಗಿದ್ದು, ಸಾವಿರಾರು ಎಕರೆ ಜಮೀನು ನೀರಿನಲ್ಲಿ ಮುಳುಗಿ ಹೋಗಿದೆ. ಕೆ.ಆರ್.ಪೇಟೆ ,ಬ್ಯಾಲದಕೆರೆ-ಶೀಳನೆರೆ ಸಂಪರ್ಕ‌ ರಸ್ತೆಯ ಸೇತುವೆ ಸಂಪೂರ್ಣವಾಗಿ ಮುಳುಗಿ ಹೋಗಿದ್ದು, ಪರ್ಯಾಯ ರಸ್ತೆಯಲ್ಲಿ ಜನರು ಸಂಚಾರ ಮಾಡುತ್ತಿದ್ದಾರೆ.

ಮಳೆ ನೀರಿನಿಂದ ಅಪಾಯದ ಮಟ್ಟದಲ್ಲಿ ಹಳ್ಳಕೊಳ್ಳದದಲ್ಲಿ ನೀರು ಹರಿಯುತ್ತಿದ್ದು ಸುತ್ತಮುತ್ತಲ ಗ್ರಾಮದ ರೈತರು ಜಮೀನಿನಲ್ಲಿವಬೆಳೆದಿದ್ದ ಕಬ್ಬು, ಭತ್ತ, ಬಾಳೆ ತೋಟಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಈಗಷ್ಟೇ ಕೆಲವೆಡೆ ಭತ್ತದ ನಾಟಿ ಮಾಡಲಾಗಿತ್ತು. ಕೆಲವು ಕಡೆ ಬೆಳೆಗಳೂ ಕೊಚ್ಚಿ ಹೋಗಿವೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವಂತೆ ಆ ಭಾಗದ ರೈತರು ಒತ್ತಾಯ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights