ರೈತ ದನಿಗೆ ತಲೆಬಾಗಿದ ಮೋದಿ ಸರಕಾರ : ಆರ್‌ಸಿಇಪಿ ಒಪ್ಪಂದಕ್ಕೆ ನಿರಾಕಾರ

ಭಾರತದ ರೈತ ದನಿಗೆ ಮೋದಿ ಸರಕಾರ ತಲೆಬಾಗಿದೆ. ರೈತರಿಗೆ ಅದರಲ್ಲಿಯೂ ಹೈನು ಕೃಷಿ ಮಾಡುವವರಿಗೆ ಮಾರಕವಾಗುತ್ತಿದ್ದ ರ‍್ಸಿಇಪಿ ಒಪ್ಪಂದಕ್ಕೆ ಸದ್ಯಕ್ಕೆ ಸಹಿ ಹಾಕದಿರಲು ಭಾರತ ನಿರ್ಧರಿಸಿದೆ. ಬ್ಯಾಂಕಾಕಿನಲ್ಲಿ ನಡೆದ ಆಸಿಯಾನ್ ದೇಶಗಳ ಶೃಂಗಸಭೆಯ ವೇಳೆ ಈ ಮಹತ್ವದ ಒಪ್ಪಂದದ ಕುರಿತಾದ ವಿಸ್ತೃತ ಚರ್ಚೆಯ ಬಳಿಕ ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಂದದ ಭಾಗವಾಗಲು ಭಾರತ ನಿರಾಕರಿಸಿತು.

ಆರ್‌ಸಿಇಪಿ ಒಪ್ಪಂದದ ಪ್ರಸ್ತುತದ ಸ್ವರೂಪವು ಆರ್‌ಸಿಇಪಿಯ ಮೂಲ ಉದ್ದೇಶ ಮತ್ತು ಒಪ್ಪಿತವಾಗಿದ್ದ ಮರ‍್ಗರ‍್ಶಿ ಸೂತ್ರಗಳನ್ನು ಸಂಪರ‍್ಣವಾಗಿ ಪ್ರತಿಬಿಂಬಿಸುತ್ತಿಲ್ಲ. ಇಂತಹ ನಿರ್ಧಾರಗಳಲ್ಲಿ ಭಾರತದ ರೈತರು, ವ್ಯಾಪಾರಿಗಳ ಭವಿಷ್ಯ ಅಡಗಿದ್ದು, ಆತುರದ ಕ್ರಮ ಸಾಧ್ಯವಿಲ್ಲ ಎಂದು ಹೇಳಿದರು.

ಈಗಿರುವಂತೆ ಆರ್ ಸಿಇಪಿ ಒಪ್ಪಂದವು ಭಾರತದ ಕಾಳಜಿ ಅಥವಾ ಮೂಲ ಉದ್ದೇಶ ಮತ್ತು ಒಪ್ಪಿತ ಮರ‍್ಗರ‍್ಶಿ ಸೂತ್ರಗಳಿಗೆ ಅನುಗುಣವಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಆರ್‌ಸಿಇಪಿ ಅಡಿಯಲ್ಲಿ ಚೀನಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಶೇ ೭೪ರಷ್ಟು ಸರಕುಗಳು ಹಾಗೂ ಜಪಾನ್, ದಕ್ಷಿಣ ಆಫ್ರಿಕಾ ಮತ್ತು ಆಸಿಯಾನ್‌ನ ಒಟ್ಟು ೧೫ ದೇಶಗಳ ಶೇ ೯೦ರಷ್ಟು ಸರಕುಗಳ ಮೇಲಿನ ಸುಂಕವನ್ನು ಭಾರತ ತೆಗೆದುಹಾಕಬೇಕಾಗುತ್ತದೆ. ಅದರಲ್ಲಿಯೂ ಚೀನಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಸುನಾಮಿಯಂತೆ ಅಪ್ಪಳಿಸುವ ಆತಂಕವೂ ಇದೆ.

ಈ ಒಪ್ಪಂದದಡಿ ಹೈನು ಕೃಷಿಕರಿಗೆ ಭಾರೀ ನಷ್ಟ ಉಂಟಾಗುವ ಭಿತಿ ಇತ್ತು. ಆ ಕಾರಣ ರ‍್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ವ್ಯಾಪಕ ಪ್ರತಿಭಟನೆ ನಡೆಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights