ರೋಗಲಕ್ಷಣಗಳಿಲ್ಲದೇ ಬಾಲಿವುಡ್ ನಟ ಕಿರಣ್ ಕುಮಾರ್ ಗೂ ಬಂತು ಕೊರೊನಾ…!

ಎಗ್ಗಿಲ್ಲದೇ ಹರಡುತ್ತಿರುವ ಕೊರೊನಾ ವೈರಸ್ ಬಾಲಿವುಡ್ ನಟ ಕಿರಣ್ ಕುಮಾರ್ ಅವರಲ್ಲೂ ಪತ್ತೆಯಾಗಿದೆ.

ಹೌದು… ಇತ್ತೀಚೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಕಿರಣ್ ಅವರಿಗೆ ಪಾಸಿಟಿವ್ ಬಂದಿದೆ. ಈ ಬಗ್ಗೆ ತಿಳುದುಕೊಂಡ  ನಟ ಸ್ವಯಂ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಆಶ್ಚರ್ಯ ಅಂದರೆ 74 ವರ್ಷ ವಯಸ್ಸಿನ ಕಿರಣ್ ಅವರಿಗೆ ಈವರೆಗೂ ಯಾವುದೇ ಕೊರೊನಾ ರೋಗ ಲಕ್ಷಣಗಳೇ ಕಂಡು ಬಂದಿಲ್ಲ. ಸಣ್ಣ ವೈದ್ಯಕೀಯ ತಪಾಸಣೆಗೆಂದು ಆಶ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ವೈದ್ಯರ ಸಲಹೆಯಂತೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಗಷ್ಟೇ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ತಕ್ಷಣ ಅವರಿಗೆ ಕ್ವಾರಂಟೈನ್ ಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಕಿರಣ್ 10 ದಿನಗಳಿಂದ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಮೇ 25 (ಸೋಮವಾರ) ಅವರು ಮುಂದಿನ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.  ಅವರು ಆರೋಗ್ಯವಾಗಿದ್ದು ಈಗಲೂ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ನಟ ಹೇಳಿದ್ದಾರೆ.

ಬಾಲಿವುಡ್ ಸಿನೆಮಾಗಳಲ್ಲಿ ಖಳನಾಯಕ ಮತ್ತು ತಂದೆಯ ಪಾತ್ರಗಳಲ್ಲಿ ನಟಿಸಲು ಈ ನಟ ಹೆಸರುವಾಸಿಯಾಗಿದ್ದಾನೆ. ‘ತೇಜಾಬ್’, ‘ಖುದಾ ಗವಾ’, ‘ಪ್ಯಾರ್ ಕಿಯಾ ತೋ ದರ್ಣ ಕ್ಯಾ’, ‘ಮುಜ್ಸೆ ದೋಸ್ತಿ ಕರೋಗೆ!’ ಫೇಮಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಿರಿಯ ನಟ ಧನಾತ್ಮಕ ಪರೀಕ್ಷೆ ಮಾಡಿದ ಮೊದಲ ಬಾಲಿವುಡ್ ಸೆಲೆಬ್ರೆಟಿ ಅಲ್ಲ. ಇದಕ್ಕೂ ಮೊದಲು ಗಾಯಕ ಕಾನಿಕಾ ಕಪೂರ್, ನಟ ಪುರಬ್ ಕೊಹ್ಲಿ, ಜೊವಾ ಮೊರಾನಿ ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights