ರೋಗ ಲಕ್ಷಣಗಳೇ ಇಲ್ಲದ ಕೊರೊನಾ ಸೋಂಕಿತರಿಗೆ ಬೇಗ ಡಿಸ್ಚಾರ್ಜ್ಗಾಗಿ ಸರ್ಕಾರ ಚಿಂತನೆ..
ರಾಜ್ಯದಲ್ಲಿ ದಿನಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ಸರ್ಕಾರ ಆಸ್ಪತ್ರೆಗಳನ್ನು ಹೇಗೆ ಖಾಲಿ ಮಾಡಬಹುದು ಎಂದು ಚಿಂತನೆ ನಡೆಸುತ್ತಿದೆ.
ಹೌದು… ರೋಗ ಲಕ್ಷಣಗಳೇ ಇಲ್ಲದ ಕೊರೊನಾ ಸೋಂಕಿತರಿಗೆ 10 ದಿನಗಳಲ್ಲೂ ರೋಗ ಲಕ್ಷಣಗಳು ಕಂಡು ಬಾರದೇ ಇದ್ದರೆ ಅಂಥವರನ್ನು ಆಸ್ಪತ್ರೆಯಿಂದ ಡಿಸ್ಚಾರ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಯಾಕೆಂದ್ರೆ ರಾಜ್ಯದಲ್ಲಿ ಕೊರೋನಾ ಸೋಂಕಿತರಲ್ಲಿ ಶೇ. 84ರಷ್ಟು ಮಂದಿಗೆ ರೋಗ ಲಕ್ಷಣಗಳೇ ಇಲ್ಲ. ಇವರ ಆರೋಗ್ಯ ಕೂಡ ಸ್ಥಿರವಾಗಿದೆ. ಇಂಥವರಿಗೆ ಆಸ್ಪತ್ರೆಯಲ್ಲಿರಿಸಿಕೊಂಡು ಚಿಕಿತ್ಸೆ ಕೊಡುವ ತುರ್ತು ಅಗತ್ಯವಿಲ್ಲ. ಹೀಗಾಗಿ ಇಂಥವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ಕಡ್ಡಾಯ ಕ್ವಾರಂಟೈನ್ ಮಾಡಲು ಸರ್ಕಾರ ಚಿಂತಿಸಿದೆ.
ರಾಜ್ಯದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತರಲ್ಲಿ ಶೇ. 84ರಷ್ಟು ಮಂದಿಗೆ ರೋಗ ಲಕ್ಷಣಗಳೇ ಇಲ್ಲ ಎಂಬ ಮಾಹಿತಿ ಇದೆ. ಇವರೆಲ್ಲರೂ ಆರೋಗ್ಯವಾಗಿಯೇ ಇದ್ದಾರೆ. ವೈದ್ಯರ ಪ್ರಕಾರ, ಇವರಿಗೆ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ಕೊಡುವ ತುರ್ತು ಅಗತ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ರೋಗಲಕ್ಷಗಳಿಲ್ಲದ ಇಂಥ ವ್ಯಕ್ತಿಗಳನ್ನು ಆಸ್ಪತ್ರೆಯಿಂದ ಬೇಗನೇ ಡಿಸ್ಚಾರ್ಜ್ ಮಾಡಿ ಮನೆಯಲ್ಲೇ ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸಲು ಯೋಜಿಸಿದೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲವಾದರೂ ಆರೋಗ್ಯ ಇಲಾಖೆ ಇದರ ಸಾಧಕ-ಬಾಧಕಗಳನ್ನು ಅವಲೋಕಿಸುತ್ತಿದ್ದಾರೆ.