ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಡಿಕೆಶಿ ಪುತ್ರಿಗೆ ಸಮನ್ಸ್
ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನೆಲೆ ಮಾಜಿ ಸಚಿವ ಡಿ.ಕೆ ಶಿವ ಕುಮಾರ್ ಪುತ್ರಿ ಐಶ್ವರ್ಯ ವಿಚಾರಣೆಗೆ ಹಾಜರಾಗಿದ್ದಾರೆ.
ನವದೆಹಲಿಯ ಇಡಿ ಕಚೇರಿಗೆ ಚಿಕ್ಕಮ್ಮ ಸುಮಾ ಅವರ ಜತೆ ಐಶ್ವರ್ಯ ಆಗಮಿಸಿದ್ದು ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ಇಡಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯಗೆ ಸಮನ್ಸ್ ನೀಡಿತ್ತು.