ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ – ವಾಹನ ಚಾಲಕನಿಗೆ ಥಳಿತ
ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ ಆರೋಪದ ಮೇಲೆ ಖಾಸಗಿ ಶಾಲೆಯ ವಾಹನದ ಚಾಲಕನಿಗೆ ಥಳಿಸಿದ ಘಟನೆ ಹುಬ್ಬಳ್ಳಿಯ ಬೆನಕ ಸ್ಕೂಲ್ ನಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿವೇಕಾನಂದ ನಗರದಲ್ಲಿ ಇರುವ ಬೆನಕ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ವಾಹನ ಚಾಲಕನಿಗೆ ಜನ ಗೂಸಾ ಕೊಟ್ಟಿದ್ದಾರೆ. ಚಾಲಕನನ್ನು ಥಳಿಸಿದ ವಿಡಿಯೋ ವೈರಲ್ ಮಾಡಿದ ಅನಾಮಧೇಯ ವ್ಯಕ್ತಿ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾನೆ.
ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ನಿವಾಸಿ ಡೆವಿಡ್ ಎಂಬುದು ಚಾಲಕನ ಹೆಸರು ತಿಳಿದುಬಂದಿದೆ. ಆದರೆ ವಿಡಿಯೋ ಮಾಡಿದ ವ್ಯಕ್ತಿಯ ಹೆಸರು ಮಾತ್ರ ಬಹುರಂಗಗೊಂಡಿಲ್ಲ. ಸದ್ಯ ಈ ವಿಡಿಯೋ ವೈರಲ್ ಆಗಿದೆ.