‘ವೆಂಕಟ್ ಕೆಟ್ಟ ಸ್ವಭಾವದ ವ್ಯಕ್ತಿ ಅಲ್ಲ’ ಹುಚ್ಚಾ ವೆಂಕಟ್ ಬಗ್ಗೆ ಕಿಚ್ಚಾ ಸುದೀಪ್ ಒಳ್ಳೆ ಮಾತು

ಮಾತಿನಲ್ಲಿ, ನೋಟದಲ್ಲಿ, ನಡುವಳಿಯಲ್ಲೂ ಒರುಟಾಗಿ ಕಾಣಿಸಿಕೊಳ್ಳುವ ಹುಚ್ಚಾ ವೆಂಕಟ್ ಬಗ್ಗೆ ಕಿಚ್ಚಾ ಸುದೀಪ್ ಒಳ್ಳೆಯ ಮಾತನಾಡಿದ್ದಾರೆ. ಹುಚ್ಚ ವೆಂಕಟ್ ಕೆಟ್ಟ ಸ್ವಭಾವದ ವ್ಯಕ್ತಿ ಅಲ್ಲ ಎಂದು ಹೇಳಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

ಹೌದು.. ಚೆನ್ನೈ, ಕೊಡಗು, ಮಂಡ್ಯ, ರಾಮನಗರ ಹೀಗೆ ನಾನಾ ಕಡೆ ಕಾಲಲ್ಲಿ ಚಪ್ಪಲಿ ಇಲ್ಲದೆ, ಉಡಲು ಒಳ್ಳೆಯ ಬಟ್ಟೆ ಇಲ್ಲದೆ, ರಸ್ತೆ ಬದಿ ಓಡಾಡುತ್ತಾ, ಕಂಡಕಂಡಲ್ಲಿ ಮಲಗುತ್ತಾ, ಜಗಳ ಮಾಡುತ್ತಾ, ಜನಗಳಿಗೆ ತೊಂದರೆ ಕೊಡುತ್ತಾ, ವಸ್ತುಗಳಿಗೆ ಹಾನಿಯನ್ನುಂಟು ಮಾಡುತ್ತಾ  ಇದ್ದ ಹುಚ್ಚಾ ವೆಂಕಟ್ ಯಾವ ಕಾರಣಕ್ಕಾಗಿ ಹೀಗೆ ವರ್ತಿಸುತ್ತಿರಬಹುದು ಎನ್ನುವುದರ ಬಗ್ಗೆ ಕಿಚ್ಚ ಸುದೀಪ್ ವಿವರಿಸಿದ್ದಾರೆ.

ಎಲ್ಲರಿಗೂ ಕೆಟ್ಟದಾಗಿ ಕಾಣಿಸಿಕೊಳ್ಳುವ ಹುಚ್ಚಾ ವೆಂಕಟ್ ಸ್ವಾಭಾವದ ಬಗ್ಗೆ ಕಿಚ್ಚ ವಿವರಿಸಿದ್ದಾರೆ. ಮಾತಿನಲ್ಲಿ ನಡುವಳಿಕೆಯಲ್ಲಿ ರೊಚ್ಚಿಗೇಳಿಸುವಂತೆ ಮಾಡುವ ವೆಂಕಟ್ ಬಗ್ಗೆ ಸುದೀಪ್ ಹೇಳಿದ್ದು ಏನು ಗೊತ್ತಾ..?

ಗುರುವಾರ ಬಿಗ್‍ಬಾಸ್ ತಂಡ ಸುದ್ದಿಗೋಷ್ಠಿಯನ್ನು ನಡೆಸಿದ್ದು, ಈ ವೇಳೆ ಸುದೀಪ್ ಅವರಿಗೆ ಹುಚ್ಚ ವೆಂಕಟ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಸುದೀಪ್, ಹುಚ್ಚ ವೆಂಕಟ್‍ಗೆ ಬೇರೆ ಸ್ಪರ್ಧಿಗಳಿಂದ ಆಗುವುದೇನು ಇಲ್ಲ. ಬಿಗ್‍ಬಾಸ್‍ಯಿಂದ ಅಥವಾ ಬೇರೆಯವರ ಜೀವನದಿಂದ ನೀವು ಏನಾದರೂ ಕಲಿಯುತ್ತೀರಾ ಎಂದರೆ ಅದು ನಿಮಗೆ ಬಿಟ್ಟ ವಿಷಯ. ವೆಂಕಟ್ ಅವರಿಗೆ ಸ್ವಲ್ಪ ಸಹಾಯ ಬೇಕು ಅನ್ಸುತ್ತೆ. ಅವರು ಕೆಟ್ಟ ಸ್ವಭಾವದ ವ್ಯಕ್ತಿ ಅಲ್ಲ. ಅವರ ಮಾತಿನಲ್ಲಿ ಒರಟುತನ ಇತ್ತೇ ಹೊರತು ಅನಾವಶ್ಯಕ ಕಾರಣಕ್ಕೆ ಮಾತನಾಡುತ್ತಿರಲಿಲ್ಲ ಎಂದು ಉತ್ತರಿಸಿದ್ದಾರೆ.

ಹುಚ್ಚ ವೆಂಕಟ್ ಅವರು ಏನೋ ಹೇಳಲು ಇಷ್ಟಪಡುತ್ತಾರೆ. ಆದರೆ ಅವರು ಹೇಳುವ ರೀತಿ ತಪ್ಪು ಇರಬಹುದು. ತುಂಬಾ ಜನಗಳಲ್ಲಿ ತಪ್ಪುಗಳಿದೆ. ಒಬ್ಬ ವ್ಯಕ್ತಿ ಒಳ್ಳೆಯವನಾಗಲು ತುಂಬಾ ಜನ ಕಾರಣ ಆಗಿರುತ್ತಾರೆ. ಹಾಗೆಯೇ ಒಬ್ಬ ವ್ಯಕ್ತಿ ಕೆಟ್ಟವನಾಲು ತುಂಬಾ ಜನ ಕಾರಣರಾಗಿರುತ್ತಾರೆ. ನಾವು ಒಬ್ಬರ ಬಗ್ಗೆ ಮಾತನಾಡುವುದು ಸುಲಭ. ಅವರಿಗೆ ಸ್ವಲ್ಪ ಸಹಾಯ ಬೇಕಿದೆ. ಅವರು ಕೆಟ್ಟ ವ್ಯಕ್ತಿ ಎಂದು ನನಗೆ ಅನಿಸುತ್ತಿಲ್ಲ. ಕೆಲವರ ಜೀವನದಲ್ಲಿ ಏನೂ ನಡೆಯದೇ ಇದ್ದಾಗ ಕೆಲವು ಒತ್ತಡಗಳು, ಕೆಲವು ನೋವುಗಳು ಅವರಿಂದ ಏನೇನೋ ಮಾಡಿಸುತ್ತಿರುತ್ತದೆ. ನಾವು ಅವನು ಸರಿಯಿಲ್ಲ, ಕೆಟ್ಟವನು ಎಂದು ಹೇಳುವುದು ಬಹಳ ಸುಲಭ. ಅವರಿಗೆ ಸ್ವಲ್ಪ ಸಮಯಬೇಕು ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights