‘ಶಾಸಕರ ರಾಜಿನಾಮೆಯಿಂದ ನಾವು ಅಧಿಕಾರದಲ್ಲಿದ್ದೇವೆ’ ಅನರ್ಹರ ಮೇಲೆ ಸಿಂಪತಿ, ಕಾಳಜಿ ತೋರಿಸಿದ ಸಿಟಿ ರವಿ

ಅನರ್ಹ ಶಾಸಕರನ್ನು ಬಿಜೆಪಿ ಕೈಬಿಡುತ್ತದೆ ಅನ್ನೋ ಆರೋಪಗಳ ನಡುವೆ ಸಚಿವ ಸಿ.ಟಿ ರವಿ ಅನರ್ಹರಿಗ ಭರವಸೆ ನೀಡುವಂತ ಹೇಳಿಕೆ ನೀಡಿದ್ದಾರೆ.

ಅನರ್ಹ ಶಾಸಕರ ರಾಜಿನಾಮೆಯಿಂದ ನಾವು ಅಧಿಕಾರದಲ್ಲಿದ್ದೇವೆ ಎಂದು ಸಿಟಿ ರವಿ ಹೇಳಿದ್ದಾರೆ. ಅನರ್ಹರ ಕುರಿತಾಗಿ ನಮಗೆ ಸಿಂಪತಿಯಿದೆ, ಕಾಳಜಿಯೂ ಇದೆ ಎಂದು ಕೋಲಾರದಲ್ಲಿ ಸಚಿವ ಸಿಟಿ ರವಿ ಹೇಳಿದ್ದಾರೆ.

ಉಪ ಚುನಾವಣೆಗೆ ಬಿಜೆಪಿಯು ಸಿದ್ದವಾಗಿದೆ. ಅನರ್ಹರಿಗೆ ಟಿಕೆಟ್ ಕೊಡುವ ವಿಚಾರ ಪಕ್ಷದ ಹೈ ಕಮಾಂಡ್ ಗೆ ಬಿಟ್ಟದ್ದು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ಚುನಾವಣೆ ಸರಾಗವಾಗಿ ನಡೆಯುತ್ತೆ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights