‘ಶಾ’ ಸಮಾವೇಶ ಸ್ಥಳದ ಸುತ್ತ ಕಪ್ಪು ಬಲೂನ್ ಹಾರಿ ಬಿಟ್ಟ ಸಿಎಎ ವಿರೋಧಿಗಳು!
ಹುಬ್ಬಳ್ಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ಹಿನ್ನಲೆಯಲ್ಲಿ ಸಮಾವೇಶ ನಡೆಯುವ ಸ್ಥಳದ ಸುತ್ತ ಕಪ್ಪು ಬಲೂನ್ ಹಾರಿ ಬಿಡಲಾಗಿದೆ.
ಹುಬ್ಬಳ್ಳಿಯ ನೆಹರು ಮೈದಾನದ ಅಂಗಳದಲ್ಲಿ ಹಾರಾಡುತ್ತಿದೆ ಕಪ್ಪು ಬಲೂನ್ ಗಳು. ಮೈದಾನದ ಕೊಂಚ ದೂರದ ಸ್ಥಳಗಳಿಂದ ಬಲೂನ್ ಗಳನ್ನು ಬಿಡಲಾಗಿದೆ. ಈ ಬಲೂನ್ ಗಳ ಕೆಳ ಭಾಘದಲ್ಲಿ ಬಿಳಿ ಬಣ್ಣದ ಪೇಪರ್ ಗಳಿದ್ದು, ಅದು ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ಬಲೂನ್ ಗಳನ್ನು ಯಾರು ಬಿಟ್ಟರು? ಯಾತಕ್ಕಾಗಿ ಬಿಟ್ಟರು? ಎನ್ನುವುದನ್ನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಅಮಿತ್ ಶಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಹುಬ್ಬಳ್ಳಿಗೆ ಪ್ರಯಾಣ ಮಾಡಲಿದ್ದಾರೆ.