‘ಸಂಚಾರಿ ಹೊಸ ನಿಯಮಗಳಿಂದ ಬಂದ ಹಣದಿಂದ ಸರ್ಕಾರ ನಡೆಯಲ್ಲ’ ಸಚಿವ ಮಾಧುಸ್ವಾಮಿ

ನಗರದಲ್ಲಿ ಸಂಚಾರಿ ಹೊಸ ನಿಯಮದಿಂದಾಗಿ ಜನ ಸುಸ್ತಾಗಿ ಹೋಗಿದ್ದಾರೆ. ಇದರಿಂದ ಸರ್ಕಾರದ ಖಜಾನೆಗೆ ಬೊಂಬಾಟ್ ಕಲೆಕ್ಷನ್ ಆಗುತ್ತಿದೆ, ಭ್ರಷ್ಟಾಚಾರ ಕೂಡ ಬರ್ಜರಿಯಾಗೇ ನಡೆಯುತ್ತಿದೆ ಅನ್ನೋ ಮಾತಿಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಖಡಕ್ ಉತ್ತರ ಕೊಟ್ಟಿದ್ದಾರೆ.

ಸಂಚಾರಿ ಹೊಸ ನಿಯಮಗಳಿಂದ ನಮ್ಮ ಸರಕಾರ ನಡೆಯಲ್ಲ. ಸಾರ್ವಜನಿಕರಿಂದ ಪಡೆಯುವ 4-5 ಸಾವಿರ ರೂಪಾಯಿಂದ ನಾವು ಸರಕಾರ ನಡೆಸಲ್ಲ.

ಜನರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಲಿ ಅನ್ನೋದಕ್ಕಾಗಿ ದುಬಾರಿ ದಂಡಗಳ ನಿಯಮ‌ ಜಾರಿ ಮಾಡಲಾಗಿದೆ. ದುಬಾರಿ ದಂಡದಿಂದ ಭ್ರಷ್ಟಾಚಾರ ಜಾಸ್ತಿಯಾಗುತ್ತೆ ಅನ್ನೋದು ನಮಗ್ಗೊತ್ತು. ಅದರಲ್ಲೇನು ಅನುಮಾನಾನೇ ಇಲ್ಲ ಎಂದ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಪೆಟ್ರೋಲ್ ದರ ಜಾಸ್ತಿ ಮಾಡೊದು ಲಾಭಕ್ಕಲ್ಲ. ಅದು ಬಹು ಉತ್ಪನ್ನ ತಯಾರಿಕೆಗೆ ಅಗತ್ಯವಿರುವ ಇಂಧನ. ಸಾರ್ವಜನಿಕರಿಗೆ ಅಗ್ಗದ ದರದಲ್ಲಿ‌ ಕೊಟ್ಟರೆ ಸದ್ಬಳಕೆಗಿಂತ ಉದಾಸೀನ ಬಳಕೆ ಹೆಚ್ಚಾಗುತ್ತದೆ. ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೊಸ ಸಂಚಾರಿ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights