ಸರ್ಕಾರಿ ಆಸ್ಪತ್ರೆಗೆ ಬೀಗ ಜಡಿದು ಹಬ್ಬಕ್ಕೆ ಹೋಗಿರುವ ವೈದ್ಯಾಧಿಕಾರಿ : ರೋಗಗಳ ಪರದಾಟ
ದಿನದ 24 ಗಂಟೆಯೂ ಸೇವೆ ನೀಡಬೇಕಾದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಗೆ ಬೀಗ ಜಡಿದು ಹಬ್ಬಕ್ಕೆ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರನಲ್ಲಿ ನಡೆದಿದೆ.
ಹೌದು.. ಆಸ್ಪತ್ರೆಯ ಮುಂಭಾಗದ ಗೇಟ್ ಗೆ ಬೀಗ ಹಾಕಿ ವೈದ್ಯರು, ಸಿಬ್ಬಂದಿಗಳು ಜೂಟ್ ಹೇಳಿದ್ದಾರೆ. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಕ್ಕೂ ಹೆಚ್ಚು ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅಟೆಂಡರ್ ಮೂಲಕ ಬೀಗ ತಗೆಸಿದ ಸಾರ್ವಜನಿಕರು, ವೈದ್ಯಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ಎಲ್ಲ ಸಿಬ್ಬಂದಿಗಳು ಹಬ್ಬಕ್ಕೆ ಹೋಗಿರುವ ಆರೋಪ ಮಾಡಿದ್ದಾರೆ.
ಸೀಗಿಹುಣ್ಣಿಮೆ ಹಬ್ಬಕ್ಕಾಗಿ ಆಸ್ಪತ್ರೆಯನ್ನು ಬಂದ್ ಮಾಡಲಾಗಿದ್ದು, ಬೀಗ ಹಾಕಿದ್ದನ್ನು ನೋಡಿ ಚಿಕಿಸ್ತೆಗಾಗಿ ಆಸ್ಪತ್ರೆಗೆ ರೋಗಿಗಳಿಗೆ ಬಂದುಹೋಗುತ್ತಿದ್ದಾರೆ. ವೈದ್ಯರ ನಡೆಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.