‘ಸಿಎಂ ಸ್ಥಾನ ಎಂದ್ಮೇಲೆ ಒತ್ತಡ ಇರುತ್ತದೆ’ ವಿ. ಸೋಮಣ್ಣ – ‘ಆ ಬಗ್ಗೆ ಮಾತನಾಡೋಕೆ ನಾನು ಚಿಕ್ಕವನು’ ಎ.ರಾಮದಾಸ್
ನಾನು ತಂತಿ ಮೇಲೆ ನಡಿಯುತ್ತಿದ್ದೇನೆ ಎಂಬ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ವಿ.ಸೋಮಣ್ಣ ಸಿಎಂ ಸ್ಥಾನ ಎಂದ ಮೇಲೆ ಒತ್ತಡ ಇರುತ್ತದೆ ಎಂದರು. ಅದನ್ನ ಅವರಿಗೆ ತಡೆದುಕೊಳ್ಳುವ ಶಕ್ತಿ ಇದೆ ಎಂದಿದ್ದಾರೆ.
ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೆ ಅನ್ನೊಂದು ಗೊತ್ತಿಲ್ಲ. ಅವರಿಗೆ ಅವರದೇ ದೃಷ್ಟಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡುವ ಕಲ್ಪನೆ ಇದೆ. ಅಘೋಚರವಾಗಿ ಅವರಿಗೆ ಏನಾದರೂ ಇರಿಸು ಮುರಿಸು ಆದರೆ. ಕೆಲ ಕಾಲ ಸಿಟ್ಟಾಗಿ ನಂತರ ಸರಿ ಹೋಗ್ತಾರೆ. ನಿನ್ನೆ ಮೊನ್ನೆ ಅವರು ಮೈಸೂರಿನಲ್ಲಿ ಖುಷಿಯಾಗಿಯೆ ಇದ್ದರು.
ದಾವಣಗೆರೆಗೆ ಹೋದಾಗ ಏನಾಯ್ತು ಗೊತ್ತಿಲ್ಲ. ನಾಳೆ ಅವರು ಮೈಸೂರಿಗೆ ಬಂದಾಗ ಈ ಬಗ್ಗೆ ಮಾತಾಡ್ತೀನಿ. ಯಡಿಯೂರಪ್ಪ ಅವರಿಗೆ ಅನುಭವವಿದೆ. ಸರಕಾರದಲ್ಲಿನ ಸಣ್ಣಪುಟ್ಟ ನ್ಯೂನತೆ ಸರಿಪಡಿಸಿಕೊಂಡು ಅವರು ಸರಕಾರ ನಡೆಸುತ್ತಾರೆಂದು
ಮೈಸೂರಿನಲ್ಲಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಆ ಬಗ್ಗೆ ಮಾತನಾಡೋಕೆ ನಾನು ಚಿಕ್ಕವನು. ಸಿಎಂ ಜೊತೆ ನಾವೇಲ್ಲ ಇದ್ದೇವೆ. ಅವರು ಯಾವುದಕ್ಕು ಚಿಂತಿಸುವ ಅಗತ್ಯವಿಲ್ಲ. ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಿಎಂಗೆ ಒತ್ತಡ ಇದ್ದೆ ಇರುತ್ತದೆ. ಅವರು ನಮ್ಮ ಟೀಂ ಕ್ಯಾಪ್ಟನ್. ಅವರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇದ್ದೆ ಇರುತ್ತೆ. ಆದ್ರೆ ಅವರ ಜೊತೆ ನಾವೇಲ್ಲ ಇದ್ದೇವೆ ಎಂದರು.