ಸಿದ್ದರಾಮಯ್ಯ ಗೆ ನನ್ನ ಮೇಲೆ ಪ್ರೀತಿ ಬಹಳ ಇದೆ – ಬಿ ಸಿ ಪಾಟೀಲ್
ಉಪಚುನಾವಣೆ ಕಾವು ರಂಗೇರುತ್ತಿದ್ದಂತೆ ಅನರ್ಹ ಶಾಸಕರು ವಿರೋಧ ಪಕ್ಷದ ನಾಯಕರನ್ನು ಹೊಗಳಲು ಶುರುವಮಾಡಿದ್ದಾರೆ.
ಹೌದು… ಹಾವೇರಿಯ ಹಿರೇಕೆರೂರು ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ಸಿದ್ದರಾಮಯ್ಯ ಪರ ಬ್ಯಾಂಟಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯ ಗೆ ನನ್ನ ಮೇಲೆ ಪ್ರೀತಿ ಬಹಳ ಇದೆ. ನಾವು ರಾಜೀನಾಮೆ ನೀಡುವ ಮೂಲಕ ಯಡಿಯೂರಪ್ಪ ಅಷ್ಟೇ ಮುಖ್ಯಮಂತ್ರಿ ಆಗಲಿಲ್ಲ. ಸಿದ್ದರಾಮಯ್ಯ ಕೂಡ ವಿರೋಧ ಪಕ್ಷದ ನಾಯಕರಾಗಿದ್ದಾರೆ ಅದಕ್ಕಾಗಿ ನನ್ನ ಮೇಲೆ ಪ್ರೀತಿ.
ಬಿ ಸಿ ಪಾಟೀಲ್ ನ ಹೊಗಳಿದರೆ ತಪ್ಪು ತಿಳಿಯುತ್ತಾರೆ ಅಂತ ಸ್ವಲ್ಪ ಬೈತ್ತಾರೆ. ಸಿದ್ದರಾಮಯ್ಯ ಬೈಯೋದು ನನಗೆ ಆರ್ಶಿವಾದ. ಮನುಷ್ಯರನ್ನ ಕುರಿ ಕೋಳಿಗೆ ಹೋಲಿಸುವ ಕೆಲಸ ಮಾಡಬಾರದು ಎಂದ ಬಿ ಸಿ ಪಾಟೀಲ್ ನಯವಾಗಿ ಬಣ್ಣ ಹಚ್ಚಿದ್ದಾರೆ.