ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್‌ಮೇಲ್‌ ಪ್ರಕರಣ : ಧರ್ಮದರ್ಶಿ ಸ್ಥಾನಕ್ಕೆ ಡಾ. ಬಸನಗೌಡ ರಾಜೀನಾಮೆ

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಟ್ರಸ್ಟಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದ ಪ್ರಕರಣ ಹಿನ್ನಲೆ ಡಾ. ಬಸನಗೌಡ ಸಂಕನಗೌಡರ್ ಮಠದ ಧರ್ಮದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಧರ್ಮದರ್ಶಿಗಳ ವಿಶೇಷ ಸಭೆಯಲ್ಲಿ ವೈಯಕ್ತಿಕ ಕಾರಣ ನೀಡಿ ರಾಜಿನಾಮೆ ನೀಡಿದ್ದಾರೆ. ಈ ವೇಳೆ ಇನ್ನೊಬ್ಬ ಟ್ರಸ್ಟಿ ವಿಜಯಲಕ್ಷ್ಮಿ ಪಾಟೀಲ್ ಸಭೆಗೆ ಗೈರಾಗಿದ್ದರು.

ಮಹಿಳಾ ಟ್ರಸ್ಟಿ ವಿಜಯಲಕ್ಷ್ಮಿ ಪಾಟೀಲ್ ಮನೆಯಲ್ಲಿದ್ದಾಗ ಏಕಾಂತ ದೃಶ್ಯ ಚಿತ್ರೀಕರಿಸಿದ ನಾಲ್ವರಿಂದ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆಂದು ಡಾ. ಬಸನಗೌಡ ಸಂಕನಗೌಡರ್ ಪೊಲೀಸರಿಗೆ ದೂರು ನೀಡಿದ್ದರು.
ಮಠದ ಸುಪ್ರವೈಜರ್ ಸುನೀಲ್ ಕಮ್ಮಾರ್ ಚಿತಾವಣಿ ಮಾರ್ಗದರ್ಶನದಲ್ಲಿ  ಸಂತೋಷ್ ಪೂಜಾರಿ, ಸಂಜು ಪಟದಾರಿ, ಗಣೇಶ್ ಕನ್ನೂರ್ ಎಂಬುವವರಿಂದ ಬ್ಲ್ಯಾಕ್‌ಮೇಲ್‌ ಮಾಡಲಾಗಿತ್ತು. ಇವರು ಹತ್ತು ಲಕ್ಷ ರೂಪಾಯಿ ಪಡೆದು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಕಿರುಕುಳ ತಾಳದೆ ಡಾ. ಬಸನಗೌಡ ಸಂಕನಗೌಡರ್ ಪೊಲೀಸರಿಗೆ ದೂರು ಕೊಟ್ಟಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಆದರೆ ವೈಯಕ್ತಿಕ ಕಾರಣ ನೀಡಿ ಡಾ. ಬಸನಗೌಡ ಸಂಕನಗೌಡರ್ ಮಠದ ಧರ್ಮದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಸಿದ್ಧಾರೂಢ ಮಠದ ಭಕ್ತರಲ್ಲಿ ತೀವೃ ಚರ್ಚೆಗೆ ಕಾರಣವಾಗಿದೆ.

 

Spread the love

Leave a Reply

Your email address will not be published. Required fields are marked *