ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಪವರ್ ಹೆಚ್ಚಿಸಿದ ಪಿ.ಆರ್.ಕೆ..!

ಪಾಪ್ ಕಾರ್ನ್ ಮಂಕಿ ಟೈಗರ್.. ಸ್ಯಾಂಡಲ್ ವುಡ್ ಅಂಗಳದಲ್ಲಿ ತುಂಬಾ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಟಗರು ಅಂತಹ ಮೆಗಾ ಹಿಟ್ ಸಿನಿಮಾ ಕೊಟ್ಟ ಮೇಲೆ, ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ ಮತ್ತೆ ಜೊತೆಯಾಗಿ ಮಾಡಿರೋ ರಾ ರಿಯಲಿಸ್ಟಿಕ್ ಸಿನಿಮಾ. ಎಕ್ ಧಮ್ ಎಲ್ಲಾ ಆಂಗಲ್ ನಿಂದ್ಲೂ ಮಾಸ್ ಫ್ಲೇವರ್ ತುಂಬಿರೋ ಚಿತ್ರ. ಬರೀ ಪೋಸ್ಟರ್ ಗಳಿಂದ್ಲೇ ಭಾರಿ ಸದ್ದು ಸುದ್ದಿ ಮಾಡಿದ್ದ ಈ ಚಿತ್ರ, ಡಬ್ಬಿಂಗ್ ವಿಡಿಯೋಗಳಿಂದ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಸೋಷಿಯಲ್ ಮಿಡಿಯಾದಲ್ಲಿ, ಡಾಲಿ ಧನಂಜಯ ಡಬ್ಬಿಂಗ್ ಪಾಪ್ ಕಾರ್ನ್ ಮಂಕಿ ಟೈಗರ್ ಗಾಗಿ ಡೈಲಾಗ್ ಡಬ್ಬಿಂಗ್ ಮಾಡ್ತಿರೋ ಸಂದರ್ಭದಲ್ಲಿ ಮಾಡಿದ್ದ ಮೇಕಿಂಗ್ ವಿಡಿಯೋಗಳು ಸಖತ್ ವೈರಲ್ ಆಗಿದ್ವು. ಫೇಸ್ ಬುಕ್ಕು , ಇನ್ಸಾಟಾ, ಟಿಕ್ ಟಾಕ್ ಎಲ್ಲೆಲ್ಲೂ ಭಾರಿ ಸದ್ದು ಮಾಡಿತ್ತು. ಈ ನಡುವೆ ಈ ಚಿತ್ರತಂಡದಿಂದ ಮತ್ತೊಂದು ಬಿಗ್ ನ್ಯೂಸ್ ಹೊರ ಬಿದಿದ್ದೆ.

     

ಸೂರಿಗೆ ಸಿಕ್ತು ಪವರ್, ಪಾಪ್ ಕಾರ್ನ್ ಮಂಕಿ ಟೈಗರ್ ಗೆ ಆಡಿಯೋಗೆ ಬಂತು ಖದರ್..!!!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರ ಸಾಥ್ ಪಾಪ್ ಕಾರ್ನ್ ಮಂಕಿ ಟೈಗರ್ಗೆ ಸಿಕ್ಕಿದೆ. ನಿರ್ದೇಶಕ ಸೂರಿಯವರೊಟ್ಟಿಗೆ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿರೋ ಪವರ್ ಸ್ಟಾರ್ ನೆಚ್ಚಿನ ನಿರ್ದೇಶಕರ, ಟ್ರಿಂಡಿ ಕಮರ್ಷಿಯಲ್ ಪ್ರಯೋಗಕ್ಕೆ ಕೈ ಜೋಡಿಸಿದ್ದಾರೆ. ಅಂದ್ರೆ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಆಡಿಯೋವನ್ನ ಪವರ್ ಸ್ಟಾರ್ ಪಿಆರ್ಕೆ ಆಡಿಯೋ ಸಂಸ್ಥೆ ಖರೀದಿಸ್ತಿದೆ. ಈಗಾಗ್ಲೇ ಮಾತುಕಥೆಯಾಗಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಅಫಿಶಿಯಲ್ ಫಸ್ಟ್ ಲುಕ್ ಟೀಸರ್ ನ ರಿಲೀಸ್ ಡೇಟ್ ನ ಅನೌನ್ಸ್ ಮಾಡೋ ಮೂಲಕ ಅಧಿಕೃತವಾಗಿ ತಿಳಿಸಲಿದೆಯಂತೆ.

ಸೂರಿ – ಚರಣ್ ಜುಗಲ್ ಬಂಧಿ, ಪಿ.ಆರ್.ಕೆಗೆ ಟ್ರೆಂಡಿ..!!!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೆಂಡ್ ಸೃಷ್ಟಿಸಿ, ಸಂಚಲನ ಸೃಷ್ಟಿಸಿದ್ದರಲ್ಲಿ ಸೂರಿ ನಿರ್ದೇಶನದ ಚರಣ್ ರಾಜ್ ಸಂಗೀತ ಸಂಯೋಜನೆಯ ಟಗರು ಪ್ರಮುಖವಾಗಿತ್ತು. ಇದೀಗ ಅದೇ ಸೂರಿ –ಚರಣ್ ಕಾಂಬಿನೇಷನ್ ನಲ್ಲೇ ಮೂಡಿ ಬಂದಿರೇ ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತೊಂದು ಟ್ರೆಂಡ್ ಸೃಷ್ಟಿಸೋದಕ್ಕೆ, ಸಂಚಲನ ಮೂಡಿಸೋದಕ್ಕೆ ಸಜ್ಜಾಗಿದೆ. ಅದು ಅದೇ ಪಿ ಆರ್ ಕೆ ಆಡಿಯೋ ಸಂಸ್ಥೆಯ ಮೂಲಕ ಅನ್ನೋದು ವಿಶೇಷ. ಈ ವಿಷ್ಯ ಹೊರ ಬರ್ತಿದ್ದಂತೆ, ಕನ್ನಡ ಸಿನಿಪ್ರಿಯರ ವಲಯದಲ್ಲಿ, ಅಭಿಮಾನಿವಲಯದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಫಸ್ಟ್ ಲುಕ್ ಟೀಸರ್ ಮತ್ತು ಆಡಿಯೋ ಮೇಲೆ ತುಂಬಾ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಭರವಸೆ ಹೆಚ್ಚಿದೆ.

ಹೊಸ ವರ್ಷಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಫಸ್ಟ್ ಲುಕ್
ಎಲ್ಲಾ ಅಂದುಕೊಂಡಂತೆ ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಟೀಸರ್ ಹೊಸ ವರ್ಷಕ್ಕೆ ಲಾಂಚ್ ಆಗೋ ಸಾಧ್ಯತೆ ಇದೆಯಂತೆ. ಈಗಾಗ್ಲೇ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಟೀಸರ್ ಕಟ್ಟಿಂಗ್ ನಲ್ಲಿ ತೊಡಗಿದ್ದು, ಸದ್ಯದಲ್ಲೇ ಟೀಸರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡಲಿದೆಯಂತೆ.
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನ ಸುಕ್ಕಾ ಸೂರಿ ಮಾಡಿದ್ದು, ಈವರೆಗೂ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಂಡಿದ್ದ ಸುಧೀರ್ ಕೆ.ಎಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಶೇಖರ್ ಎಸ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ತಾರಾಗಣದಲ್ಲಿ, ಡಾಲಿ ಧನಂಜಯ ಜೊತೆಗೆ ಕಾಕ್ರೋಚ್ ಖ್ಯಾತಿಯ ಸುದಿ, ಜಾಕಿ ಭಾವನ ಪತಿ ನವೀನ್, ಪೂರ್ಣಚಂದ್ರ, ನಿವೇದಿತಾ,ಅಮೃತ ಅಯ್ಯರ್,ಸಪ್ತಮಿ, ಮೋನಿಶಾ ನಾಡಿಗೇರ್, ಗೌತಮ್ ಸೇರಿದಂತೆ ಪ್ರತಿಭಾಂತ ಕಲಾವಿದ್ರ ದಂಡೇ ಚಿತ್ರದಲ್ಲಿದೆ. ಪಾಪ್ ಕಾರ್ನ್ ಮಂಕಿ ಟೈಗರ್ ಅಸಲಿ ಗಮ್ಮತ್ತು ಇಲ್ಲಿಂದ ಘಮಿಸ್ತಿದ್ದು, ಕನ್ನಡ ಸಿನಿಪ್ರಿಯರಲ್ಲಿ ಈ ಚಿತ್ರದ ಮೇಲೆ ವಿಶೇಷವಾದ ಕುತೂಹಲ ಹುಟ್ಟಿಕೊಳ್ತಿದೆ. ಅಷ್ಟೇ ಅಲ್ಲದೇ ಈ ಚಿತ್ರದ ಕಾಂಬೋ ಸಿನಿಮಾ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights