ಹರಿಯಾಣದ ಪೇಟಿಂಎ ಉದ್ಯೋಗಿಗೆ ತಗುಲಿದ ಕೊರೊನಾ : ಶಾಕ್ ಆದ ಸಿಬ್ಬಂದಿಗಳು!

ಭಾರತದಲ್ಲಿ ಕೊರೊನಾ ಸೋಕಿಂತರ ಸಂಖ್ಯೆ 28 ಇದ್ದದ್ದು ಸದ್ಯ 29ಕ್ಕೆ ಏರಿಕೆಯಾಗಿರುವುದು ದೃಢಪಟ್ಟು ಜನರಲ್ಲಿ ದಿನದಿಂದ ದಿನಕ್ಕೆ ಆಂತಕ ಹೆಚ್ಚಿಸುತ್ತಿದೆ.

ಹೌದು…. ಹರಿಯಾಣದ ಗುರುಗ್ರಾಮದಲ್ಲಿರುವ ಪೇಟಿಂಎ ಉದ್ಯೋಗಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ತಮ್ಮ ಉದ್ಯೋಗಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಎಲ್ಲ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಗುರುಗ್ರಾಮದ ಪೇಟಿಎಂ ಸಂಸ್ಥೆ ಆದೇಶಿಸಿದೆ. ಕಂಪನಿಯ ಇನ್ನಿತರ ಸಿಬ್ಬಂದಿಗಳು ಭಯಭೀತರಾಗಿ ರಕ್ತ ಪರೀಕ್ಷೆಗಳನ್ನ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, 2 ದಿನಗಳ ಕಾಲ ಪೇಟಿಎಂ ಸಂಸ್ಥೆಯನ್ನು ಮುಚ್ಚಲಾಗಿದ್ದು ಸ್ವಚ್ಚತಾ ಕಾರ್ಯ ನಡೆಯುತ್ತಿದೆ.

ಕೊರೊನಾ ಸೋಂಕು ಪತ್ತೆಯಾಗಿದ್ದ ಇಟಲಿಗೆ ಹರಿಯಾಣದ ಪೇಟಿಎಂ ಉದ್ಯೋಗಿ ಕೆಲವು ದಿನಗಳ ಹಿಂದಷ್ಟೇ ಪ್ರವಾಸಕ್ಕೆ ತೆರಳಿದ್ದರು. ಆತ ಭಾರತಕ್ಕೆ ವಾಪಾಸಾದ ಬಳಿಕ ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿ ತಗುಲಿತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆತನ ಕುಟುಂಬಕ್ಕೆ ನೆರವಾಗುವ ಭರವಸೆಯನ್ನು ಪೇಟಿಎಂ ವಕ್ತಾರ ಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights