ಗಡಿ ಭಾಗದಲ್ಲಿ ಭಾರತೀಯ ಪ್ರಜೆಯನ್ನು ಗುಂಡಿಕ್ಕಿ ಕೊಂದ ನೇಪಾಳ ಪೊಲೀಸರು!

ಭಾರತ, ನೇಪಾಳ್ ಗಡಿ ಭಾಗದಲ್ಲಿ ಭಾರತೀಯ ಪ್ರಜೆಯನ್ನು ನೇಪಾಳ್ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ.

ಮೂವರು ಭಾರತೀಯ ಪ್ರಜೆಗಳು ನೇಪಾಳಕ್ಕೆ ಪ್ರವೇಶಿಸಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನೇಪಾಳ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಮೂವರಲ್ಲಿ ಒಬ್ಬರು ಗುಂಡಿನ ದಾಳಿಯಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದು ಇನ್ನೊಬ್ಬ ವ್ಯಕ್ತಿ ಭಾರತೀಯ ತಂಡಕ್ಕೆ ಮರಳಿದ್ದಾರೆ.

ಪಪ್ಪು ಸಿಂಗ್ ಮತ್ತು ಗುರ್ಮೀತ್ ಸಿಂಗ್ ಎಂಬ ಇತರ ಇಬ್ಬರು ವ್ಯಕ್ತಿಗಳೊಂದಿಗೆ ನೇಪಾಳಕ್ಕೆ ತೆರಳಿದ್ದ ಗೋವಿಂದ (26) ಮೃತಪಟ್ಟಿದ್ದಾರೆ.

ಪಿಲಿಭಿತ್ ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್, “ನೇಪಾಳಕ್ಕೆ ತೆರಳಿದ್ದ ಮೂವರು ಭಾರತೀಯ ಪ್ರಜೆಗಳು ಕೆಲವು ವಿಷಯದ ಬಗ್ಗೆ ನೇಪಾಳ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾಋಎ ಎಂಬ ಮಾಹಿತಿ ನಮಗೆ ಬಂದಿದೆ. ಒಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿತ್ತು. ಈ ವೇಳೆ ಆ ವ್ಯಕ್ತಿಯನ್ನು  ಆಸ್ಪತ್ರೆಗೆ  ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವ್ಯಕ್ತಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಡಿ ದಾಟಿ ಜೀವವನ್ನು ಉಳಿಸಿಕೊಂಡಿದ್ದಾರೆ. ಆದರೆ ಮೂರನೆಯ ವ್ಯಕ್ತಿ ಕಾಣೆಯಾಗಿದ್ದಾರೆ ” ಎಂದಿದ್ದಾರೆ.

 

Spread the love

Leave a Reply

Your email address will not be published. Required fields are marked *