ಮದುವೆಯಾಗಿ ಪ್ರೇಮಿಯೊಂದಿಗೆ ಎಸ್ಕೇಪ್ : ವಿವಾಹಿತ ಮಗಳನ್ನೇ ಕೊಂದ ತಂದೆ!

ಮದುವೆಯಾಗಿ ಕೆಲವೇ ದಿನಗಳಲ್ಲಿ ಪ್ರೇಮಿಯೊಂದಿಗೆ ಓಡಿಹೋದ ವಿವಾಹಿತ ಮಗಳನ್ನು ತಂದೆ ಕತ್ತು ಹಿಸುಕಿ ಕೊಂದ ಘಟನೆ ಜೈಪುರದ ದೌಸಾ ಜಿಲ್ಲೆಯಲ್ಲಿ ನಡೆದಿದೆ.

50 ರ ಹರೆಯದ ಶಂಕರ್ ಲಾಲ್ ಸೈನಿ 19 ವರ್ಷದ ತನ್ನ ಮಗಳು ಪಿಂಕಿಯನ್ನು ಕೊಂದ ಕೂಡಲೇ ಪೊಲೀಸರಿಗೆ ಶರಣಾಗಿದ್ದಾನೆ. ಗುರುವಾರ ಪೋಲೀಸ್ ಠಾಣೆಗೆ ಬಂದ ತಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಫೆಬ್ರವರಿ 16 ರಂದು ಪಿಂಕಿ ತನ್ನ ಇಚ್ಚೆಗೆ ವಿರುದ್ಧವಾಗಿ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಅವಳು ಮೂರು ದಿನಗಳ ನಂತರ ತನ್ನ ಪೋಷಕರ ಮನೆಗೆ ಮರಳಿದ್ದಾಳೆ. ಫೆಬ್ರವರಿ 21 ರಂದು ತನ್ನ ಪ್ರೇಮಿ ರೋಶನ್ ಜೊತೆ ಓಡಿಹೋಗಿದ್ದಾಳೆ.

ಆಕೆಯ ಓಡಿಹೋದ ನಂತರ, ಆಕೆಯ ತಂದೆ ತನ್ನ ಮಗಳನ್ನು ಅಪಹರಿಸಿದ್ದಾರೆಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದರು ಎಂದು ಕುಮಾರ್ ಹೇಳಿದ್ದಾರೆ.

ಪಿಂಕಿಯ ಕುಟುಂಬ ಸದಸ್ಯರು ಅಂತಿಮವಾಗಿ ಅವಳನ್ನು ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದಾರೆ. ಈ ವೇಳೆ ಅವಳ ತಂದೆ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಸೈನಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

Spread the love

Leave a Reply

Your email address will not be published. Required fields are marked *